ಪೆಗಾಸಸ್ ಕಣ್ಗಾವಲು ಕುರಿತ ಮಾಧ್ಯಮ ವರದಿ ನಿಜವಾಗಿದ್ದರೆ ವಿಷಯ ಗಂಭೀರ : ಸುಪ್ರೀಂ ಕೋರ್ಟ್

Prasthutha|

ನವದೆಹಲಿ, ಆ.5: ಪೆಗಾಸಸ್ ಕಣ್ಗಾವಲು ಆರೋಪಗಳು ನಿಜವಾಗಿದ್ದರೆ ಅದು ಗಂಭೀರ ವಿಷಯ. ಆದರೆ ಸುಪ್ರೀಂ ಕೋರ್ಟ್‌ಗೆ ಬರುವ ಮೊದಲು ಪೊಲೀಸರಿಗೆ ಕ್ರಿಮಿನಲ್ ದೂರು ಸಲ್ಲಿಸಲು ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

- Advertisement -

ಪೆಗಾಸಸ್ ಬೇಹುಗಾರಿಕಾ ಹಗರಣದ ಸ್ವತಂತ್ರ ತನಿಖೆ ಕೋರಿ ಭಾರತೀಯ ಸಂಪಾದಕರ ಒಕ್ಕೂಟ, ವಿವಿಧ ಪತ್ರಕರ್ತರು ಹಾಗೂ ಮತ್ತಿತರರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ಸಿಜೆಐ ಎನ್ ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ವಿಭಾಗೀಯ ಪೀಠ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 10ಕ್ಕೆ ಮುಂದೂಡಿದೆ.

2019 ರಲ್ಲಿ ಬೇಹುಗಾರಿಕೆ ವರದಿಗಳು ಬಂದಿವೆ, ಹೆಚ್ಚಿನ ಮಾಹಿತಿ ಪಡೆಯಲು ಯಾವುದೇ ಪ್ರಯತ್ನಗಳನ್ನು ಮಾಡಲಾಗಿದೆಯೇ ಎಂದು ನನಗೆ ಗೊತ್ತಿಲ್ಲ. ನಾನು ಪ್ರತಿ ಪ್ರಕರಣದ ಸತ್ಯಾಂಶಗಳ ಪತ್ತೆಗೆ ಹೋಗುವುದಿಲ್ಲ, ಕೆಲವರು ಫೋನ್‌ ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳುತ್ತಾರೆ. ದೂರುಗಳಿಗಾಗಿ ಟೆಲಿಗ್ರಾಫ್ ಕಾಯಿದೆ ಇದೆ ಎಂದು ಸಿಜೆಐ ರಮಣ ಹೇಳಿದರು.

- Advertisement -

ಕೇಂದ್ರ ಸರ್ಕಾರದ ಕಾನೂನು ಅಧಿಕಾರಿಗಳಿಗೆ ಅರ್ಜಿಗಳ ಪ್ರತಿಗಳನ್ನು ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯ ಮುಂದಿನ ಮಂಗಳವಾರ ಮುಂದಿನ ವಿಚಾರಣೆಗೆ ಪ್ರಕರಣವನ್ನು ನಿಗದಿಪಡಿಸಿದರು. ಆದಾಗ್ಯೂ, ಈ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಔಪಚಾರಿಕ ನೋಟಿಸ್ ಜಾರಿ ಮಾಡಿಲ್ಲ.

“ಮಾಧ್ಯಮಗಳಲ್ಲಿನ ವರದಿಗಳು ಸರಿಯಾಗಿದ್ದರೆ ಆರೋಪಗಳು ಗಂಭೀರ ಸ್ವರೂಪದ್ದಾಗಿರುತ್ತವೆ. ಕೆಲವರು ತಮ್ಮ ಫೋನ್ ಹ್ಯಾಕ್ ಆಗಿದೆ ಎಂದು ಹೇಳುತ್ತಾರೆ, ಆದರೆ ಅವರು ಕ್ರಿಮಿನಲ್ ದೂರು ದಾಖಲಿಸಲು ಪ್ರಯತ್ನಿಸಿಲ್ಲ ಎಂದು ಸಿಜೆಐ ರಮಣ ಹೇಳಿದರು

Join Whatsapp