ವೇಗವಾಗಿ ಹರಡುವ ಕೊರೊನ ವೈರಸ್ | ಯುಕೆಯ ಎಲ್ಲಾ ವಿಮಾನಗಳಿಗೆ ನಿರ್ಬಂಧ ವಿಧಿಸಿ : ಕೇಜ್ರಿವಾಲ್ ಒತ್ತಾಯ

Prasthutha|

 ನವದೆಹಲಿ : ಹೊಸ ರೂಪಾಂತರಿತ ಕೊರೊನ ವೈರಸ್ ವ್ಯಾಪಕ ಹರಡುತ್ತಿರುವ ಹಿನ್ನೆಲೆಯಲ್ಲಿ, ಯುಕೆಯ ಎಲ್ಲಾ ವಿಮಾನಗಳಿಗೆ ದೇಶ ಪ್ರವೇಶಕ್ಕೆ ನಿರ್ಬಂಧ ಹೇರುವಂತೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.

ಯುಕೆಯಲ್ಲಿ ಹೊಸ ‘ಸೂಪರ್ ಸ್ಪ್ರೆಡರ್(ವೇಗವಾಗಿ ಹರಡಬಲ್ಲ)’ ರೂಪಾಂತರಿತ ಕೊರೊನ ವೈರಸ್ ಪತ್ತೆಯಾಗಿದೆ. ತಕ್ಷಣವೇ ಯುಕೆಯ ಎಲ್ಲಾ ವಿಮಾನಗಳಿಗೆ ನಿರ್ಬಂಧ ಹೇರುವಂತೆ ನಾನು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ,

- Advertisement -

ಲಂಡನ್ ನಲ್ಲಿ ಈಗಾಗಲೇ ಜನತೆ ಕ್ರಿಸ್ ಮಸ್ ಹಬ್ಬದ ಸಂಭ್ರಮಕ್ಕೆ ಕತ್ತರಿಹಾಕಿ, ಮನೆಯೊಳಗಿರಿ ಎಂದು ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಒತ್ತಾಯಿಸಿದ್ದಾರೆ. ಭಾನುವಾರದಿಂದ ಲಂಡನ್ ಮತ್ತು ಆಗ್ನೇಯ ಬ್ರಿಟನ್ ನಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ.   

- Advertisement -