ಢಾಕಾ: ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್’ರೌಂಡರ್ ಸುನಿಲ್ ನರೈನ್ , ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೇವಲ 13 ಎಸೆತಗಳಲ್ಲಿ 50 ರನ್ ಬಾರಿಸುವ ಮೂಲಕ T-20 ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗದ ಅರ್ಧಶತಕ ದಾಖಲಿಸಿದ 2ನೇ ಆಟಗಾರ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಆ ಮೂಲಕ T-20 ಕ್ರಿಕೆಟ್’ನಲ್ಲಿ 13 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿದ ಮೂವರ ಎಲೈಟ್ ಪಟ್ಟಿಯಲ್ಲಿ ಸ್ಥಾನ ಪಡೆಯುವುದನ್ನು ಸ್ವಲದರಲ್ಲಿಯೇ ನರೈನ್ ತಪ್ಪಿಸಿಕೊಂಡರು.
ಬಿಪಿಎಲ್ ಟೂರ್ನಿಯಲ್ಲಿ ಕೊಮಿಲ್ಲಾ ವಿಕ್ಟೋರಿಯನ್ಸ್ ತಂಡದ ಪರ ಆಡುತ್ತಿರುವ ನರೈನ್, ಗುರುವಾರ ನಡೆದ ಚಟ್ಟೋಗ್ರಾಮ್ ಚಾಲೆಂಜರ್ಸ್ ವಿರುದ್ಧದ ಪಂದ್ಯದಲ್ಲಿ ಈ ಅಮೋಘ ಸಾಧನೆ ಮಾಡಿದ್ದಾರೆ.
ಮೀರ್‌ಪುರದ ಶೇರ್ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ BPL T-20 ಲೀಗ್‌ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ವಿಕ್ಟೋರಿಯನ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ನರೈನ್ ತಾನು ಎದುರಿಸಿದ ಮೊದಲ 13 ಎಸೆತಗಳಲ್ಲಿ ಕ್ರಮವಾಗಿ 0, 6, 4, 4, 6, 6, 4, 6, 0, 4, 6, 1, 6 ರನ್ ಗಳಿಸುವ ಮೂಲಕ ಅರ್ಧಶತಕ ಪೂರ್ತಿಗೊಳಿಸಿದರು. ಅಂತಿಮವಾಗಿ 16 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 57ರನ್’ಗಳಿಸಿ ನಿರ್ಗಮಿಸಿದರು. ನರೈನ್ ಸ್ಫೋಟಕ ಬ್ಯಾಟಿಂಗ್’ನಿಂದಾಗಿ ವಿಕ್ಟೋರಿಯನ್ಸ್ ತಂಡ 149ರನ್’ಗಳ ಗುರಿಯನ್ನು ಕೇವಲ 12.5 ಓವರ್‌ಗಳಲ್ಲಿ ತಲುಪಿತು.
T-20 ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕಗಳು.
- ಯುವರಾಜ್ ಸಿಂಗ್: [ ಟೀಮ್ ಇಂಡಿಯಾ]
12 ಎಸೆತ – 2007,
vs ಇಂಗ್ಲೆಂಡ್ - ಕ್ರಿಸ್ ಗೇಲ್: [ ಮೆಲ್ಬೋರ್ನ್ ರೆನೆಗೇಡ್ಸ್]
12 ಎಸೆತ – 2016
vs ಅಡಿಲೇಡ್ ಸ್ಟ್ರೈಕರ್ಸ್ - ಹಜರತುಲ್ಲಾ ಝಜೈ: [ ಕಾಬೂಲ್ ಜ್ವಾನನ್]
12 ಎಸೆತ – 2018
vs ಬಾಲ್ಖ್ ಲೆಜೆಂಡ್ಸ್ - ಮಾರ್ಕಸ್ ಟ್ರೆಸ್ಕೋಥಿಕ್, [ಸೋಮರ್‌ಸೆಟ್] 13 ಎಸೆತ – 2010, vs ಹ್ಯಾಂಪ್‌ಶೈರ್
- ಸುನಿಲ್ ನರೈನ್: [ಕೊಮಿಲ್ಲಾ ವಿಕ್ಟೋರಿಯನ್ಸ್ ]
13 ಎಸೆತ – 2022,
vs ಚಟ್ಟೋಗ್ರಾಮ್ ಚಾಲೆಂಜರ್ಸ್.