ಸಚಿವರಾದ ಅಶ್ವತ್ಥನಾರಾಯಣ, ಎನ್. ನಾಗೇಶ್ ರನ್ನು ಭೇಟಿಯಾದ ಯು.ಟಿ.ಖಾದರ್

Prasthutha|

ಬೆಂಗಳೂರು: ಪದವಿ ಕಾಲೇಜಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಂಘಟನೆಗಳ ಮುಖಂಡರೊಂದಿಗೆ ಸಚಿವ ಡಾ.ಅಶ್ವತ್ಥ ನಾರಾಯಣ ಅವರನ್ನು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಭೇಟಿಯಾಗಿ ಮಾತುಕತೆ ನಡೆಸಿದರು.

- Advertisement -

ನ್ಯಾಯಾಲಯದ ಸ್ಪಷ್ಟ ಆದೇಶವಿದ್ದರೂ ಕೆಲವು ಪದವಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸುತ್ತಿರುವ ಬಗ್ಗೆ ವಿದ್ಯಾರ್ಥಿ ಸಂಘಟನೆಗಳ ಮುಖಂಡರೊಂದಿಗೆ ಸಚಿವ ಅಶ್ವತ್ಥ ನಾರಾಯಣರನ್ನು ವಿಪಕ್ಷ ಉಪ ನಾಯಕ ಶಾಸಕ ಯು.ಟಿ.ಖಾದರ್ ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಸಚಿವ ಅಶ್ವತ್ಥ ನಾರಾಯಣ ನಿರ್ದಿಷ್ಟ ಸಮವಸ್ತ್ರ ನಿಗದಿಪಡಿಸದ ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಿಜಾಬ್ ಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಮೂಡಿಸಬಾರದೆಂದು ಸ್ಪಷ್ಟವಾಗಿ ತಿಳಿಸಿದ್ದು ಕೆಲವು CBSE ಕಾಲೇಜುಗಳಲ್ಲಿ ಅಲ್ಲಿನ ಆಡಳಿತ ಮಂಡಳಿಯು ಸಮವಸ್ತ್ರ ನಿಗದಿಪಡಿಸಿದ್ದಲ್ಲಿ ಕೋರ್ಟ್ ಆದೇಶವನ್ನು ಪರಿಗಣಿಸಿ ವ್ಯವಸ್ಥಿತ ರೀತಿಯಲ್ಲಿ ಎಲ್ಲರೂ ಸೌಹಾರ್ದಯುತವಾಗಿ ಕಾನೂನನ್ನು ಗೌರವಿಸುವ ಕೆಲಸ ಮಾಡಬೇಕೆಂದು ಅವರು ತಿಳಿಸಿದರು.

- Advertisement -

ಕಾಲೇಜು ಅಥವಾ ಶಾಲಾ ಗೇಟುಗಳಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ತಡೆಯುವಂತಿಲ್ಲ. ಕಾಲೇಜು ಅಥವಾ ಶಾಲಾ ಆವರಣದಲ್ಲಿ ಹಿಜಾಬ್ ಧರಿಸಬಹುದಾಗಿಯೂ, ಅಲ್ಲದೇ ಶಿಕ್ಷಕಿಯರು ಹಾಗೂ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂಬುದಾಗಿ ಸ್ಪಷ್ಟವಾಗಿ ತಿಳಿಸಿದರು.

ನಂತರ ಯು.ಟಿ.ಖಾದರ್ ನೇತೃತ್ವದ ಶಾಸಕರ ನಿಯೋಗ ಶಿಕ್ಷಣ ಸಚಿವ ನಾಗೇಶ್ ರನ್ನು ಭೇಟಿ ಮಾಡಿ ಕೂಡಾ ಹಿಜಾಬ್ ವಿವಾದದ ಬಗ್ಗೆ ಮಾತುಕತೆ ನಡೆಸಲಾಯಿತು.

Join Whatsapp