ಸುಲ್ತಾನ್ ಪುರ ಇನ್ನು ಮುಂದೆ ಕುಶ ಭವನ ಪುರ

Prasthutha|

ಲಕ್ನೋ: ಉತ್ತರ ಪ್ರದೇಶದ ಸುಲ್ತಾನ್ ಪುರ ಜಿಲ್ಲೆಯ ಹೆಸರನ್ನು ಕುಶ ಭವನ ಪುರ ಮಾಡಲು ಅಗತ್ಯದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸುಲ್ತಾನ್ ಪುರ ನಗರ ಸಭೆ ಅಧ್ಯಕ್ಷೆ ಬಬಿತಾ ಜೈಸ್ವಾಲ್ ತಿಳಿಸಿದ್ದಾರೆ.ಜನವರಿಯಲ್ಲಿ ನಗರ ಸಭೆ ಈ ಬಗ್ಗೆ ತೀರ್ಮಾನ ತೆಗೆದುಕೊಂಡು ರಾಜ್ಯ ಸರಕಾರಕ್ಕೆ ಕಳುಹಿಸಿತ್ತು. ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಯೋಗಿ ಇಲ್ಲಿಗೆ ಬಂದವರು ಇದು ತಡವಾಗುವುದಿಲ್ಲ ಎಂದಿದ್ದರು.


ಈ ಕ್ಷೇತ್ರದ ಸಂಸದೆ ಮನೇಕಾ ಗಾಂಧಿಯವರು ಈ ಬಗೆಗೆ ಅಗತ್ಯದ ಕ್ರಮ ತೆಗೆದುಕೊಳ್ಳಲು ತನ್ನ ಆಪ್ತ ಸಹಾಯಕ ವಿಜಯಸಿಂಗ್ ರಘುವಂಶಿಯವರಿಗೆ ವಹಿಸಿದ್ದಾರೆ. ಜನರ ಒಪ್ಪಿಗೆ ಪತ್ರಗಳನ್ನು ಪಡೆದಿರುವುದಾಗಿ ರಘುವಂಶಿ ತಿಳಿಸಿದ್ದಾರೆ. ರಾಮನು ಸಾಯುವುದಕ್ಕೆ ಮೊದಲು ತನ್ನ ರಾಜ್ಯವನ್ನು ಪಾಲು ಮಾಡಿ ಕೊಡುತ್ತಾನೆ. ಕುಶನಿಗೆ ಈ ಪ್ರದೇಶ ದೊರೆಯಿತಂತೆ. ಕುಶನು ಇಲ್ಲೊಂದು ಭವನ ನಿರ್ಮಿಸಿದನಂತೆ. ಹಾಗಾಗಿ ಇದು ಕುಶ ಭವನ ಪುರ ಎನ್ನಲಾಗಿದೆ.

- Advertisement -