ಸುಳ್ಯದಲ್ಲಿ ಮತ್ತೆ ಭೂಕಂಪ : ಮನೆಗಳು ಭಾಗಶಃ ಕುಸಿತ

Prasthutha|

ಪುತ್ತೂರು : ಸುಳ್ಯ ನಗದರ ಹೊರವಲಯದಲ್ಲಿ ಇಂದು ಮತ್ತೆ ಭೂಮಿ ಕಂಪಿಸಿದ್ದು ಮನೆ ಗೋಡೆಗಳು ನೆಲಸಮವಾದ ಘಟನೆಗಳು ನಡೆದಿವೆ. ಒಂದೇ ದಿನ ಎರಡನೇ ಬಾರೀ ಭೂಮಿ ಕಂಪಿಸಿದ್ದು ಕೆಲದಿನಗಳಿಂದ ಗಡಿ ಪ್ರದೇಶದಲ್ಲಿ ಹಲವೆಡೆ ಇಂತಹ ದುರ್ಘಟನೆಗಳು ನಡೆಯುತ್ತಿವೆ. ಇದರಿಂದ ಸಾರ್ವಜನಿಕರು ಆತಂಕಕ್ಕೀಡಾಗಿದ್ದು, ಬೇರೆ ಕಡೆಗಳಿಗೆ ವಲಸೆ ಹೋಗುತ್ತಿದ್ದಾರೆ.

- Advertisement -

ಭೂಕಂಪನದ ಪರಿಣಾಮ ಚಿಂತೆಗೀಡಾಗಿರುವ ಜನರಿಗೆ ಜಿಲ್ಲಾಧಿಕಾರಿಯು ಆಶ್ವಾಸನೆ ನೀಡಿದ್ದು, ಯಾವುದೇ ಸಮಸ್ಯೆಯಿದ್ದರೂ ನಾವು ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಕಳೆದ ಭಾರಿ ಕೊಡಗಿನಲ್ಲಿ ಭೂಕುಸಿತಕ್ಕೂ ಮುಂಚೆ ಭೂಕಂಪನವಾಗಿದ್ದು  ಈ ಬಾರಿಯೂ ಮಳೆಗಾಳದಲ್ಲಿ ಏನಾದರೂ ಅನಾಹುತ ಸಂಭವಿಸಬಹುದು ಎಂದು ಜನರು ಭಯಭೀತರಾಗಿದ್ದಾರೆ.

- Advertisement -

Join Whatsapp