ಬಿಜೆಪಿಯೇ ನಿಜವಾದ ‘ತುಕ್ಡೇ ತುಕ್ಡೇ’ ಗ್ಯಾಂಗ್ : ಶಿರೋಮಣಿ ಅಕಾಲಿ ದಳ ನಾಯಕ ಸುಖಬೀರ್ ಸಿಂಗ್ ಬಾದಲ್ ಆಕ್ರೋಶ

Prasthutha|

ಅಮೃತಸರ : ಬಿಜೆಪಿಯೇ ನಿಜವಾದ ‘ತುಕ್ಡೆ ತುಕ್ಡೆ’ ಗ್ಯಾಂಗ್ ಎಂದು ಬಿಜೆಪಿಯ ಮಾಜಿ ಮಿತ್ರ ಪಕ್ಷ ಶಿರೋಣಿ ಅಕಾಲಿ ದಳ (ಎಸ್ ಎಡಿ)ದ ನಾಯಕರು ಆರೋಪಿಸಿದ್ದಾರೆ. ಪಂಜಾಬ್ ನ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಎಸ್ ಎಡಿ ಪಕ್ಷದ ಹಿರಿಯ ನಾಯಕ ಸುಖಬೀರ್ ಸಿಂಗ್ ಬಾದಲ್ ರೈತರ ಪ್ರತಿಭಟನೆಗೆ ಸಂಬಂಧಿಸಿ ಬಿಜೆಪಿಗರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಈ ವಿಷಯ ತಿಳಿಸಿದ್ದಾರೆ.

- Advertisement -

ಬಿಜೆಪಿ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್. ಇದು ದೇಶದ ರಾಷ್ಟ್ರೀಯ ಐಕ್ಯತೆಯನ್ನು ತುಂಡು ತುಂಡಾಗಿ ಒಡೆದಿದೆ. ಮುಸ್ಲಿಮರ ವಿರುದ್ಧ ನಾಚೆಕೆಯಲ್ಲದೆ ಹಿಂದೂಗಳನ್ನು ಪ್ರಚೋದಿಸುತ್ತದೆ. ಈಗ ಶಾಂತಿಪ್ರಿಯ ಪಂಜಾಬಿ ಹಿಂದೂಗಳನ್ನು ನಮ್ಮ ಸಿಖ್ ಸಹೋದರರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ. ದೇಶಭಕ್ತ ಪಂಜಾಬ್ ಅನ್ನು ಬಿಜೆಪಿ ಕೋಮು ಜ್ವಾಲೆಗೆ ತಳ್ಳಲು ಯತ್ನಿಸುತ್ತಿದೆ ಎಂದು ಬಾದಲ್ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಸರಕಾರ ತನ್ನ ಅಹಂಕಾರ ಬದಿಗಿಟ್ಟು ಪ್ರತಿಭಟನೆ ನಡೆಸುತ್ತಿರುವ ರೈತರ ಮಾತುಗಳನ್ನು ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

- Advertisement -

ಬಿಜೆಪಿ ಸರಕಾರದ ವಿರುದ್ಧ ಯಾರೇ ನ್ಯಾಯಯುತ ಪ್ರತಿಭಟನೆ ನಡೆಸಿದರೂ ಅವರನ್ನು ಎಡಪಂಥೀಯರಾಗಿ ಬಿಂಬಿಸುವುದಲ್ಲದೆ, ಅವರನ್ನು ‘ತುಕ್ಡೇ ತುಕ್ಡೇ ಗ್ಯಾಂಗ್ ‘ ಎಂದು ಚಿತ್ರಿಸುವ ಮೂಲಕ ದೇಶವನ್ನು ವಿಭಜಿಸುವ ದೇಶದ್ರೋಹಿಗಳು ಎಂಬರ್ಥದಲ್ಲಿ ಬಿಂಬಿಸುವುದು ಬಿಜೆಪಿ ಮತ್ತು ಅದನ್ನು ಬೆಂಬಲಿಸುವ ಮುಖ್ಯವಾಹಿನಿಗಳ ಇತ್ತೀಚಿನ ಕಾರ್ಯಶೈಲಿಯಾಗಿದೆ. ಪ್ರತಿಯೊಂದು ಹೋರಾಟಗಳನ್ನು ಇದೇ ರೀತಿ ಚಿತ್ರಿಸಿ, ಹೋರಾಟವನ್ನು ಹತ್ತಿಕ್ಕಲು ಮುಖ್ಯವಾಹಿನಿ ಮಾಧ್ಯಮಗಳೂ ಬಿಜೆಪಿಗೆ ಬೆಂಬಲವಾಗಿ ನಿಂತಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ಈ ವಿಚಾರವಾಗಿ, ಸುಖಬೀರ್ ಸಿಂಗ್ ಬಾದಲ್ ಸರಿಯಾದ ತಿರುಗೇಟನ್ನೇ ನೀಡಿದ್ದಾರೆ.

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳ ಸೆಪ್ಟಂಬರ್ ಅಂತ್ಯದಲ್ಲಿ ಎನ್ ಡಿಎ ಮೈತ್ರಿಕೂಟ ಮುರಿದು ಹೊರಬಂದಿತ್ತು.

Join Whatsapp