ಹೀಗೊಬ್ಬ ‘ಟ್ವಿಟರ್ ಹಂತಕ’ | ಸೋಶಿಯಲ್ ಮೀಡಿಯಾ ಪರಿಚಯದ 9 ಮಂದಿಯ ಹತ್ಯೆ ಮಾಡಿದ ವಿಕೃತ ಕೊಲೆಗಾರನಿಗೆ ಮರಣ ದಂಡನೆ

Prasthutha|

ಟೋಕಿಯೊ : ‘ಟ್ವಿಟರ್ ಹಂತಕ’ನೆಂದು ಕುಖ್ಯಾತಿ ಪಡೆದ ಜಪಾನ್ ನ 30 ವರ್ಷದ ಯುವಕನೊಬ್ಬನಿಗೆ ಟೋಕಿಯೊ ನ್ಯಾಯಾಲಯವೊಂದು ಮರಣ ದಂಡನೆ ವಿಧಿಸಿದೆ. ಆನ್ ಲೈನ್ ನಲ್ಲಿ ಪರಿಚಯವಾದ 9 ಮಂದಿಯನ್ನು ಹತ್ಯೆಗೈದ ಅಪರಾಧಕ್ಕಾಗಿ ಈ ಶಿಕ್ಷೆ ವಿಧಿಸಲಾಗಿದೆ.

ತಾಕಾಹಿರೊ ಶಿರೈಶಿ (30) ತಾನು ಮಾಡಿರುವ ಕೊಲೆಗಳನ್ನು ಒಪ್ಪಿಕೊಂಡಿದ್ದಾರೆ. ಟ್ವಿಟರ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದೆನಿಸುತ್ತಿದೆ ಎಂದು ಪೋಸ್ಟ್ ಮಾಡಿದ್ದವರನ್ನು ಗುರಿಯಾಗಿಸಿ, ಅವರ ಸ್ನೇಹ ಸಂಪಾದಿಸಿ, ಸಾಯಲು ನಿಮಗೆ ಸಹಾಯ ಮಾಡುತ್ತೇನೆ ಎಂದು ಹೇಳಿ, 9 ಮಂದಿಯನ್ನು ವಿಕೃತವಾಗಿ ಈತ ಹತ್ಯೆ ಮಾಡಿದ್ದಾನೆ.

- Advertisement -

ಮೃತರೆಲ್ಲರೂ 15-26ರ ನಡುವಿನ ವಯಸ್ಸಿನವರೇ ಆಗಿದ್ದಾರೆ. ಮೃತರೆಲ್ಲರೂ ಸಾಯಲು ಅನುಮತಿಸಿದ್ದರು, ಹೀಗಾಗಿ ಆತನಿಗೆ ಜೈಲು ಶಿಕ್ಷೆ ವಿಧಿಸದರೆ ಸಾಕು ಎಂದು ಆತನ ನ್ಯಾಯವಾದಿ ವಾದಿಸಿದ್ದರು. ಆದರೆ, ಇದನ್ನು ಒಪ್ಪದ ನ್ಯಾಯಮೂರ್ತಿಗಳು, ಯಾರೊಬ್ಬರೂ ಸಾಯುವುದಕ್ಕೆ ಸಮ್ಮತಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  

ಪ್ರಕರಣದ ವಿಚಾರಣೆಯ ಬಳಿಕ, ತೀರ್ಪು ಪ್ರಕಟನೆಯ ವೇಳೆ ನ್ಯಾಯಾಲಯದಲ್ಲಿ ಸುಮಾರು 400ಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದರು. ಹತ್ಯೆಗೀಡಾದ ಸಂತ್ರಸ್ತರ ಹೆತ್ತವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

- Advertisement -