ಬೆಳಗಾವಿ : ಮಕ್ಕಳಿಗೆ ಕ್ರಿಮಿನಾಶಕ ಕುಡಿಸಿ ಮಕ್ಕಳನ್ನು ಹತ್ಯೆಗೈದು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆದಿದೆ.
ಪ್ರವೀಣ್ ಶೆಟ್ಟಿ (37), ಪತ್ನಿ ರಾಜೇಶ್ವರಿ (27) ಮಕ್ಕಳಾದ ಅಮೃತಾ (8) ಹಾಗೂ ಅದ್ವಿತ್ (6) ಸಾವಿಗೀಡಾದ ಮೃತದೈವಿಗಳು.
ಪ್ರವೀಣ್ ಶೆಟ್ಟಿ ಮತ್ತು ರಾಜೇಶ್ವರಿ ಮಕ್ಕಳಿಗೆ ಕ್ರಿಮಿನಾಶ ಕುಡಿಸಿ, ಬಳಿಕ ತಾವೂ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ರಾಮದುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.