ಕೃಷಿ ಕಾನೂನು ವಿರುದ್ಧ ಪುದುಚೇರಿ ವಿಧಾನಸಭೆ ನಿರ್ಣಯ ಅಂಗೀಕಾರ; ಕಾನೂನು ಪ್ರತಿ ಹರಿದ ಮುಖ್ಯಮಂತ್ರಿ

Prasthutha|

ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಪುದುಚೇರಿ ವಿಧಾನಸಭೆ ಸೋಮವಾರ ನಿರ್ಣಯ ಅಂಗೀಕರಿಸಿದೆ.
ಮುಖ್ಯಮಂತ್ರಿ ವಿ.ನಾರಾಯಣಸಾಮಿ ಸದನದಲ್ಲಿ ಕೃಷಿ ಕಾನೂನುಗಳ ಪ್ರತಿಗಳನ್ನು ಹರಿದು ಹಾಕಿದ ಘಟನೆಯೂ ನಡೆಯಿತು. ಇದೇ ವೇಳೆ ಪ್ರತಿಭಟನೆಯ ವೇಳೆ ಸಾವನ್ನಪ್ಪಿದ ರೈತರಿಗೆ ಎರಡು ನಿಮಿಷ ಮೌನಾಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಕೃಷಿ ಸಚಿವ ಆರ್ ಕಮಲಕನ್ನನ್ ಅವರು ಮಂಡಿಸಿದ ನಿರ್ಣಯದ ಕುರಿತು ಮಾತನಾಡಿದ ಮುಖ್ಯಮಂತ್ರಿ ವಿ ನಾರಾಯಣಸಾಮಿ ಅವರು ಕಾನೂನುಗಳು ರೈತರು ಮತ್ತು ಕೃಷಿಗೆ ವಿರುದ್ಧವಾಗಿವೆ ಎಂದು ಹೇಳಿದರು.
“ದೆಹಲಿ ಗಡಿಯಲ್ಲಿ ಕಳೆದ 54 ದಿನಗಳಿಂದ ರೈತರು ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿದ್ದಾರೆ. ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರ ಹೋರಾಟದಿಂದಾಗಿ 35,000 ಕೋಟಿ ರೂ. ಆದಾಯವನ್ನು ನಷ್ಟವಾಗಿದೆ ಎಂದು ಅವರು ಹೇಳಿದರು.
ಕಾರ್ಪೊರೇಟ್‌ಗಳನ್ನು ಬೆಂಬಲಿಸುವ ಮಸೂದೆಗಳ ಪ್ರತಿಗಳನ್ನು ಈಗಾಗಲೇ ತಾವು ಹರಿದುಹಾಕಿದ್ದು, ಮತ್ತೊಮ್ಮೆ ಈಗ ಅವುಗಳನ್ನು ಸದನದಲ್ಲಿ ಹರಿದು ಹಾಕುತ್ತಿದ್ದೇನೆ ಎಂದು ಹೇಳಿದ ಮುಖ್ಯಮಂತ್ರಿ, ಕಾನೂನು ಪ್ರತಿಗಳನ್ನು ಹರಿದುಹಾಕಿದರು.
ಬಳಿಕ ಕೃಷಿ ಕಾನೂನುಗಳ ವಿರುದ್ಧ ನಿರ್ಣಯ ಅಂಗೀಕರಿಸಲಾಯಿತು.

Join Whatsapp