ಹೃದಯಾಘಾತಕ್ಕೊಳಗಾಗಿದ್ದ ನಾಲ್ವರು ವೃದ್ಧರಿಗೆ ಯಶಸ್ವಿ ರೋಬೋಟಿಕ್‌ ಶಸ್ತ್ರಚಿಕಿತ್ಸೆ

Prasthutha|

ಬೆಂಗಳೂರು: ಇತ್ತೀಚೆಗಷ್ಟೇ ವೈದ್ಯಕೀಯ ಲೋಕಕ್ಕೆ ಪರಿಚಯವಾದ ರೋಬೋಟ್‌ ಅಸಿಸ್ಟೆಡ್‌ ಕರೋನರಿ ಆರ್ಟರಿ ಬೈಪಾಸ್‌ ಸರ್ಜರಿ (ಸಿಎಬಿಜಿ)ಯ ಮೂಲಕ ಹೃದಯಾಘಾತಕ್ಕೆ ಒಳಗಾಗಿದ್ದ ನಾಲ್ವರು ರೋಗಿಗಳಿಗೆ ಫೊರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಈ ನೂತನ ತಂತ್ರಜ್ಞಾನ ಹೆಚ್ಚು ಉಪಯುಕ್ತವಾಗಿದೆ ಎಂದು ಫೊರ್ಟಿಸ್‌ ಆಸ್ಪತ್ರೆ ಹೃದಯ ತಜ್ಞ ಡಾ. ವಿವೇಕ್‌ ಜವಳಿ ಹೇಳಿದ್ದಾರೆ.

- Advertisement -

40 ವರ್ಷ ಮೇಲ್ಪಟ್ಟ ನಾಲ್ವರು ರೋಗಿಗಳು ವಿವಿಧ ಕಾರಣಗಳಿಂದ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಮೊದಲು ಆಂಜಿಯೋಗ್ರಾಮ್‌ ಗೆ ಒಳಗಾಗುವಂತೆ ಸಲಹೆ ನೀಡಲಾಗಿತ್ತು. ಈ ವೇಳೆ ಏಕನಾಳದ ಪರಿಧಮನಿಯ ಕಾಯಿಲೆ ಇರುವುದು ತಿಳಿದು ಬಂದಿತು. ಹೀಗಾಗಿ ಅವರಿಗೆ ಈ ನೂತನ ತಂತ್ರಜ್ಞಾನವಾದ ರೋಬೋಟಿಕ್ ಚಿಕಿತ್ಸೆ ನೀಡಲಾಯಿತು. ಈ ರೋಬೋಟಿಕ್‌ ಚಿಕಿತ್ಸೆಯೂ ಅತ್ಯಂತ ಸುರಕ್ಷಿತ ಹಾಗೂ ಉಪಯುಕ್ತವಾಗಿದೆ. ಎದೆ ಭಾಗದಲ್ಲಿ ಸಣ್ಣ ಛೇದವನ್ನು ನಿರ್ಮಿಸುವ ಮೂಲಕ ರೋಬೋಟಿಕ್‌ ಮೂಲಕ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತದೆ. ಈ ಕಾರ್ಯವಿಧಾನದ ಮೂಲಕ ನಡೆಸುವ ಶಸ್ತ್ರಚಿಕಿತ್ಸೆಯಿಂದ ರಕ್ತಹಾನಿ ಹಾಗೂ ನೋವು ಕಡಿಮೆಯಾಗಲಿದೆ. ಜೊತೆಗೆ ರೋಗಿಯೂ ಕೇವಲ ಒಂದು ದಿನದಲ್ಲೇ ಮನೆಗೆ ತೆರಳಬಹುದು ಎಂದು ವಿವರಿಸಿದರು. ಈ ಮೂವರು ರೋಗಿಗಳು ತಮ್ಮ ರೊಬೋಟಿಕ್‌ ಚಿಕಿತ್ಸೆಯ ಬಳಿಕ ಶೀಘ್ರವೇ ಚೇತರಿಸಿಕೊಳ್ಳುವ ಜೊತೆಗೆ, ಶೇ.100ರಷ್ಟು ಶೇತರಿಕೆ ಕಾಣುತ್ತಿರುವುದು ವಿಶೇಷ ಎಂದು ಅವರು ತಿಳಿಸಿದರು.

Join Whatsapp