ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಕೆ; ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸಿದ ಕಾಂಗ್ರೆಸ್ ನಾಯಕರು

Prasthutha|

ಬೆಂಗಳೂರು: ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವ ಶಾಸಕ ರಮೇಶ ಜಾರಕಿಹೊಳಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ಸೋಮವಾರ ದೂರು ಸಲ್ಲಿಸಿದ್ದಾರೆ.

- Advertisement -


ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಣ್ ಅವರು ರಾಜ್ಯ ಚುನಾವಣಾ ಆಯುಕ್ತರ ಕಚೇರಿಗೆ ದೂರು ನೀಡಿದರು.


ಈ ಬಗ್ಗೆ ಪ್ರತಿಕ್ರಿಸಿಯಿದ ಕೆಪಿಸಿಸಿ ವಕ್ತಾರರು, ‘ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ ರಮೇಶ ಜಾರಕಿಹೊಳಿ ಅಪೂರ್ಣ ಮಾಹಿತಿ‌ ನೀಡಿದ್ದಾರೆ. ಸೌಭಾಗ್ಯ ಶುಗರ್ ಕಂಪನಿ ಸೇರಿ ಬೇರೆ ಬೇರೆ ಕಂಪನಿಗಳಿಗೆ ಸಂಬಂಧಿಸಿದ ದಾಖಲಾತಿ‌ಗಳನ್ನು ಅವರು ಕೊಟ್ಟಿಲ್ಲ. ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಇರುವ ದಾಖಲೆಗಳನ್ನೂ ಕೊಟ್ಟಿಲ್ಲ.ಇಬ್ಬರು ಮಕ್ಕಳು ಸೇರಿ ಮೂವರ ಹೆಸರಿನಲ್ಲಿ ಸೌಭಾಗ್ಯ ಶುಗರ್ ಕಂಪನಿ ಮೂಲಕ ಒಂಬತ್ತು ಬ್ಯಾಂಕ್‌ಗಳಲ್ಲಿ ರಮೇಶ ಜಾರಕಿಹೊಳಿ ₹ 578 ಕೋಟಿ ಸಾಲ ಪಡೆದಿದ್ದಾರೆ. ಈ ಕಂಪನಿ ದಿವಾಳಿ ಎಂದು ಘೋಷಣೆ ಮಾಡಿದ್ದರೂ ಬೇನಾಮಿ ಹೆಸರಲ್ಲಿ ನಡೆಯುತ್ತಿದೆ’ ’ ಎಂದು ದೂರಿದರು.



Join Whatsapp