ಟ್ವಿಟರ್‌ ನ ನೂತನ ಸಿಇಒ ಆಗಿ ಎಲಾನ್ ಮಸ್ಕ್‌…!

Prasthutha|

ವಾಷಿಂಗ್ಟನ್: ಸದ್ಯಕ್ಕೆ ಟ್ವಿಟರ್‌ನ ಸಿಇಒ ಆಗಿ ಸ್ವತಃ ತಾನೇ ಕಾರ್ಯನಿರ್ವಹಿಸುವುದಾಗಿ ಉದ್ಯಮಿ ಎಲಾನ್ ಮಸ್ಕ್‌ ತಿಳಿಸಿದ್ದಾರೆ.

- Advertisement -

ಮಸ್ಕ್‌ ಅವರು ತಮ್ಮ ಟ್ವಿಟರ್ ಖಾತೆಯ ಬಯೋದಲ್ಲಿ ‘ಚೀಫ್‌ ಟ್ವಿಟರ್‌’ ಎಂದು ಬದಲಿಸಿಕೊಂಡಿದ್ದಾರೆ. ಆದರೆ, ಅವರು ಎಷ್ಟು ದಿನದವರೆಗೆ ಸಿಇಒ ಆಗಿ ಮುಂದುವರಿಯಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ದೊರೆಯಲಿಲ್ಲ.

ಟ್ವಿಟರ್‌ ಕಂಪನಿಯನ್ನು ಮಸ್ಕ್‌ ಅವರು ಸುಮಾರು ₹ 3.62 ಲಕ್ಷ ಕೋಟಿಗೆ ಖರೀದಿಸಿದ್ದು, ಕಳೆದವಾರ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ.

- Advertisement -

ಮಸ್ಕ್‌ ಅವರು ಸದ್ಯ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ ‘ಟೆಸ್ಲಾ’, ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ‘ಸ್ಪೇಸ್‌ಎಕ್ಸ್‌’, ಕೃತಕ ಬುದ್ಧಿಮತ್ತೆ ಸಾಧನಗಳನ್ನು ಅಭಿವೃದ್ಧಿಪಡಿಸುವ ‘ನ್ಯೂರಲಿಂಕ್‌’, ಸುರಂಗ ನಿರ್ಮಾಣಕ್ಕೆ ಸಂಬಂಧಿಸಿದ ‘ದಿ ಬೋರಿಂಗ್‌ ಕಂಪನಿ’ಯನ್ನು ಮುನ್ನಡೆಸುತ್ತಿದ್ದಾರೆ.

Join Whatsapp