ಲೈವ್ ನ್ಯೂಸ್ ವೇಳೆ ನಿರೂಪಕನ ಮೇಲೆ ಬಿದ್ದ ಸ್ಟುಡಿಯೋ ಸೆಟ್!

Prasthutha|

ಕೊಲಂಬಿಯಾ : ESPN FC ರೇಡಿಯೋ ನ್ಯೂಸ್ ಚಾನೆಲ್ ಲೈವ್ ನ್ಯೂಸ್ ಪ್ರಸಾರ ನೀಡುತ್ತಿದ್ದ ಸಂದರ್ಭ ಸ್ಟುಡಿಯೋ ಸೆಟ್ ನ ಒಂದು ಭಾಗವು ಬಿದ್ದ ಕಾರಣ ಕೊಲಂಬಿಯಾದ ಟಿವಿ ನಿರೂಪಕ ಗಾಯಗೊಂಡ ಘಟನೆ ನಡೆದಿದೆ.
ESPN ಕೊಲಂಬಿಯಾದ ಪತ್ರಕರ್ತ ಕಾರ್ಲೋಸ್ ಆರ್ಡುಜ್ ಅದೃಷ್ಟವಶಾತ್ ಯಾವುದೇ ದೊಡ್ಡ ಗಾಯಗಳಾಗದೆ ಜೀವಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದ್ದು, ಈಗಾಗಲೇ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

ಲೈವ್ ಶೋ ಸಂದರ್ಭದಲ್ಲಿ ಕ್ರೀಡಾ ವಿಶ್ಲೇಷಕ ಕುರ್ಚಿಯ ಮೇಲೆ ಕುಳಿತಿದ್ದು, ಸೆಟ್ ನ ಒಂದು ಭಾಗ ಬೆನ್ನಿನ ಮೇಲೆ ಏಕಾಏಕಿ ಬಿದ್ದ ಪರಿಣಾಮ ಆತನ ಮುಖ ಮೇಜಿಗೆ ಗುದ್ದಿರುವ ವಿಡಿಯೋ ವೈರಲ್ ಆಗಿದೆ. ಕ್ಯಾಮೆರಾ ತಕ್ಷಣ ಶಾಟ್ ಅನ್ನು ಕತ್ತರಿಸಿದೆ. ನಂತರ ನಿರೂಪಕ ತನಗೆ ಕೇವಲ ಮೂಗಿನ ಮೇಲೆ ಗಾಯವಾಗಿದೆ ಮತ್ತು ಬೇರೇನೂ ಆಗಿಲ್ಲ, ತಾನು ಚೆನ್ನಾಗಿರುವುದಾಗಿ ತಿಳಿಸಿದ್ದಾರೆ.
‘ನಿನ್ನೆ ರಾತ್ರಿ ನಡೆದ ಅಪಘಾತದ ಬಗ್ಗೆ ನನಗೆ ಪತ್ರ ಬರೆದು , ಮೆಸೇಜ್ ಮಾಡಿ ಸಾಂತ್ವಾನ ನೀಡಿದವರಿಗೆ ಧನ್ಯವಾದ, ನಾನು ಚೆನ್ನಾಗಿದ್ದೇನೆ, ದೇವರಿಗೆ ಧನ್ಯವಾದಗಳು. ಮೂಗಿಗೆ ಸಣ್ಣದಾಗಿ ಗಾಯವಾಗಿದೆ. ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.

- Advertisement -