ಮುಂಬೈ: ಗದರಿಸಿ, ಅಪಮಾನಿಸಿ, ಕೆಟ್ಟ ಪದ ಬಳಸಿ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಅಂತಾರಾಷ್ಟ್ರೀಯ ಶಾಲೆಯ ಅಧ್ಯಕ್ಷರೊಬ್ಬರಿಗೆ ಬಾಂಬೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.
“ನಿಸ್ಸಂದೇಹವಾಗಿ ಶಿಕ್ಷಕರು ವಿದ್ಯಾರ್ಥಿಗಳನ್ನು ವಾಗ್ದಂಡಿಸಬಹುದು. ಆದರೆ ಅದು ಅವರ ಕೋಮಲ ಮನಸ್ಸನ್ನು ಛಿದ್ರಗೊಳಿಸುವ ಭಾಷೆಯಲ್ಲಿ ಅಲ್ಲ” ಎಂದು ನ್ಯಾಯಮೂರ್ತಿ ವಿನಯ್ ಜೋಶಿ ಹೇಳಿದ್ದಾರೆ.
ಏಪ್ರಿಲ್ 1, 2022 ರಂದು ಈ ಘಟನೆ ನಡೆದಿದ್ದು. ಆತ್ಮಹತ್ಯೆ ಮಾಡಿಕೊಂಡ ಬಾಲಕ ಹುಡುಗಿಯೊಬ್ಬಳೆಡೆಗೆ ಫುಟ್ ಬಾಲ್ ಅನ್ನು ಅಚಾತುರ್ಯದಿಂದ ಒದ್ದಿದ್ದನು. ಆತನನ್ನು ʼಸಿಂಬಾಲಿಕ್ ಇಂಟರ್ ನ್ಯಾಶನಲ್ ಸ್ಕೂಲ್ʼನ ಅಧ್ಯಕ್ಷ ಗಣಪತರಾವ್ ಪಾಟೀಲ್ ತರಾಟೆಗೆ ತೆಗೆದುಕೊಂಡಿದ್ದರು.
ಬಾಲಕನಿಗೆ “ನಾಲಾಯಕ್, ಭೂಮಿಗೆ ಭಾರ, ಕೊಳೆಗೇರಿಯಲ್ಲಿ ಬದುಕುವವನು” ಎಂದು ನಿಂದಿಸಿದ್ದರು.