ಅಮೆರಿಕದಲ್ಲಿ ಚಾಕು ಇರಿತ: ವಿದ್ಯಾರ್ಥಿ ಮೃತ್ಯು

Prasthutha|

ವಾಷಿಂಗ್ಟನ್: ಅಮೆರಿಕದ ಇಂಡಿಯಾನಾದಲ್ಲಿ ಫಿಟ್ ನೆಸ್ ಸೆಂಟರ್ ನಲ್ಲಿ ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಭಾರತ ಮೂಲದ ವಿದ್ಯಾರ್ಥಿ ವರುಣ್ ರಾಜ್ ಪುಚಾ (24) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

- Advertisement -


ವಾಲ್ಪಾರೈಸೊ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ವರುಣ್ ಅಕ್ಟೋಬರ್ 29 ರಂದು ಸಾರ್ವಜನಿಕ ಜಿಮ್ ನಲ್ಲಿದ್ದಾಗ ದುಷ್ಕರ್ಮಿ ಜೋರ್ಡಾನ್ ಆಂಡ್ರೇಡ್ (24) ಎಂಬಾತ ಆತನ ತಲೆಗೆ ಚಾಕುವಿನಿಂದ ಇರಿದಿದ್ದ. ಘಟನೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.


ವಿದ್ಯಾರ್ಥಿ ಅಗಲಿಕೆ ಬಳಿಕ ಮಾಹಿತಿ ನೀಡಿರುವ ವಾಲ್ಪರೈಸೊ ವಿಶ್ವವಿದ್ಯಾಲಯ, ವರುಣ್ ರಾಜ್ ಪುಚ್ಚಾ ಅಗಲಿಕೆ ಸುದ್ದಿಯನ್ನು ನಾವು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದೇವೆ. ನಮ್ಮ ಕ್ಯಾಂಪಸ್ ಸಮುದಾಯದ ಭಾಗವಾಗಿದ್ದ ವಿದ್ಯಾರ್ಥಿಯನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದೆ.



Join Whatsapp