ಮಾಜಿ ಸಿಎಂ ಯಡಿಯೂರಪ್ಪಗೆ ಭೀಷ್ಮನ ಸ್ಥಿತಿ ಆಗಿದೆ: ಆಯನೂರು ಮಂಜುನಾಥ್

Prasthutha|

ಶಿವಮೊಗ್ಗ: ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಭೀಷ್ಮನಿಗಾದ ಸ್ಥಿತಿ ಆಗಿದೆ. ಕುರುಕ್ಷೇತ್ರ ಯುದ್ಧ ಮಾತ್ರ ಮಾಡಬೇಕು. ಆದರೆ, ಪಟ್ಟಕ್ಕೆ ಮಾತ್ರ ಕೂರುವ ಹಾಗಿಲ್ಲ ಎಂಬಂತಾಗಿದೆ ಎಂದು ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.

- Advertisement -


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಒಂದು ಜವಾಬ್ದಾರಿ ಇದೆ. ಅವರು ಎಲ್ಲಾ ಕಡೆ ಓಡಾಡುತ್ತಾರೆ. ಯಡಿಯೂರಪ್ಪಗೆ ವಯಸ್ಸಾಗಿದೆ ಎಂದು ಹೇಳಿ ಅಧಿಕಾರದಿಂದ ಕೆಳಗೆ ಇಳಿಸಿರುವುದು ನನಗೆ ದುಃಖವಾಗಿದೆ. ಅವರಿಗೆ ಅಧಿಕಾರ ನಡೆಸಲು ವಯಸ್ಸಾಗಿತ್ತು. ಆದರೆ ಈಗ ಬರ ಅಧ್ಯಯನ ನಡೆಸಲು ಅವರನ್ನು ಬಳಸಿಕೊಳ್ಳುತ್ತಿದ್ದಿರಲ್ಲಾ. ಅವರಿಗೆ ವಂಚಿಸಲು, ಮೋಸ ಮಾಡಲು ಅಧಿಕಾರದಿಂದ ವಯಸ್ಸಿನ ನೆಪ ಹೇಳಿ ಕೆಳಗೆ ಇಳಿಸಿದ್ದೀರಿ. ಪಕ್ಷ ಕಟ್ಟಿದ ಅವರಿಗೆ ಅವಮಾನ ಮಾಡಿ, ಅವರಿಂದ ಅಧಿಕಾರ ಕಸಿದುಕೊಂಡಿರಿ. ಆದರೆ ಈಗ ಅವರಿಗೆ ವಯಸ್ಸು ವಾಪಸ್ ಬಂದಿದೆಯಾ ಎಂದು ಬಿಜೆಪಿ ನಾಯಕರನ್ನ ಪ್ರಶ್ನೆ ಮಾಡಿದ್ದಾರೆ.



Join Whatsapp