ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Prasthutha|

 ಬೆಂಗಳೂರು: ರಾಜಾನುಕುಂಟೆ ಬಳಿಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಚಾಕು ಇರಿಯಲಾಗಿದ್ದು, ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ ಚಾಕು ಇರಿದವನು ಬೇರೆ ಕಾಲೇಜಿನ ವಿದ್ಯಾರ್ಥಿ ಆಗಿದ್ದು, ತಾನೂ ಕೂಡ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

- Advertisement -

ಹೊಸ ವರ್ಷದ ಆಚರಣೆ ಮುಗಿಸಿಕೊಂಡು ಕಾಲೇಜಿಗೆ ಆಗಮಿಸಿದ ವೇಳೆ ಈ ಘಟನೆ ನಡೆದಿದೆ. ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಬಳಿ ಹೋಗಿ ಚಾಕು ತೆಗೆದುಕೊಂಡು ಹೊಟ್ಟೆ ಮತ್ತು ಇತರೆ ಭಾಗಕ್ಕೆ ಇರಿದಿದ್ದಾನೆ. ಪರಿಣಾಮ ಆಕೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದು, ಬೇರೆ ವಿದ್ಯಾರ್ಥಿಗಳು ಕೂಡ ಹತ್ತರಕ್ಕೆ ಬರದಂತೆ ಚಾಕು ತೋರಿಸಿ ಬೆದರಿಸಿದ್ದಾನೆ. ನಂತರ ಅದೇ ಚಾಕುವಿನಿಂದ ತನ್ನ ಹೊಟ್ಟೆಗೂ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾನೆ. ಗಂಭೀರ ಗಾಯಗೊಂಡು ಬಿದ್ದು ಒದ್ದಾಡುತ್ತಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರಾಜಾನುಕುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಕೊಲೆಯಾದ ವಿದ್ಯಾರ್ಥಿನಿಯಲ್ಲಿ ಲಯಸ್ಮಿತಾ (19 ) ಎಂದು ಗುರುತಿಸಲಾಗಿದೆ. ಕೋಲಾರ ಮೂಲದ ಮೃತ ವಿದ್ಯಾರ್ಥಿನಿ ಬಿಟೆಕ್ ಅಭ್ಯಾಸ ಮಾಡುತ್ತಿದ್ದಳು. ಕಾಲೇಜಿಗೆ ತೆರಳಿದ ಪವನ್ ಕಲ್ಯಾಣ್ , ಕ್ಲಾಸ್ ರೂಂ ಅಲ್ಲಿ ಇದ್ದ ಲಯಸ್ಮಿತಾಗೆ ಹೊರಗೆ ಬರಲು ಹೇಳಿದ್ದಾನೆ. ಬಳಿಕ 10 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ  ಪವನ್ ಕಲ್ಯಾಣ್ ಕೂಡ ತನಗೆ ಚಾಕುವಿನಿಂದ ಇರಿದುಕೊಂಡಿದ್ದಾನೆ. 

- Advertisement -

 ಇಬ್ಬರೂ ಕೂಡ ಒಂದೇ ಊರಿನವರು ಎಂದು ತಿಳಿದುಬಂದಿದೆ. ಆದರೆ, ಪವನ್ ಕಲ್ಯಾಣ್ ಬೇರೆ‌ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದನು. ಪ್ರೀತಿ ವಿಚಾರದಲ್ಲಿ ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.  

Join Whatsapp