ನೌಶಾದ್ ಸೂರಲ್ಪಾಡಿ, ಮುಷರ್ರಫ್ ನಿವಾಸಕ್ಕೆ ಎಸ್’ಡಿಪಿಐ ನಾಯಕರ ಭೇಟಿ – ಮುಷರ್ರಫ್ ಬಡ ಕುಟುಂಬಕ್ಕೆ ನೆರವಾಗಲು ಆಗ್ರಹ

Prasthutha|

ಮಂಗಳೂರು: ಅಗಲಿದ ಸಮುದಾಯದ ಪ್ರೀತಿಯ ನಾಯಕ ನೌಶಾದ್ ಸೂರಲ್ಪಾಡಿ ಮತ್ತು ಅವರೊಂದಿಗೆ ಅಪಘಾತದಲ್ಲಿ ಮರಣ ಹೊಂದಿದ ಚಾಲಕ ಮುಷರ್ರಫ್ ಅವರ ನಿವಾಸಕ್ಕೆ ಎಸ್’ಡಿಪಿಐ ನಿಯೋಗ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿತು.

- Advertisement -


ಬಡವರ ಪಾಲಿನ ಆಶಾಕಿರಣವಾಗಿದ್ದ ನೌಶಾದ್ ಸೂರಲ್ಪಾಡಿ ತನ್ನ ಚಾಲಕನಿಗೆ ಕೆಲಸ ನೀಡಿ ನೆರವಾದಂತೆಯೇ, ಕಡು ಬಡವರಾದ ಚಾಲಕ ಮುಷರ್ರಫ್’ನ ಕುಟುಂಬಕ್ಕೆ ಅವರ ಅನುಪಸ್ಥಿತಿಯಲ್ಲಿ ಸಮುದಾಯದ ಎಲ್ಲಾ ಸ್ಥಿತಿವಂತರು ನೆರವಾಗಬೇಕೆಂದು ಎಸ್’ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ತುಂಬೆ ಆಗ್ರಹಿಸಿದರು.


ಈ ಸಮಯದಲ್ಲಿ ಎಸ್’ಡಿಪಿಐ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಬಂಟ್ವಾಳ ವಿಧಾನ ಸಭಾ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ ಮತ್ತಿತರ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.
ಬಳಿಕ ನಿಯೋಗ ಖಬರ್ ಸಂದರ್ಶಿಸಿತು.

Join Whatsapp