ಉಕ್ರೇನ್ ನಿಂದ ಸುರಕ್ಷಿತವಾಗಿ ಕೊಡಗಿಗೆ ಆಗಮಿಸಿದ ವಿದ್ಯಾರ್ಥಿನಿ ಮದೀಹಾ

Prasthutha|

ಮಡಿಕೇರಿ: ಯುದ್ಧಪೀಡಿತ ಉಕ್ರೇನ್ ನಿಂದ ಕೊಡಗಿನ ವಿದ್ಯಾರ್ಥಿನಿ ಸುರಕ್ಷಿತವಾಗಿ ಊರಿಗೆ ಮರಳಿದ್ದಾರೆ.

- Advertisement -

ಇದರಿಂದ ಆಕೆಯ ಕುಟುಂಬ ನಿಟ್ಟುಸಿರು ಬಿಟ್ಟಿದೆ. ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಗ್ರಾಮದ ಮದೀಹಾ ( 21) ಬುಧವಾರ ಬೆಳಗ್ಗಿನ ಜಾವ ಮನೆಗೆ ಆಗಮಿಸಿದರು.

ರಕ್ಷಣೆಯ ಬಳಿಕ ನನಗೆ ಮರು ಜನ್ಮ ಸಿಕ್ಕಂತಾಗಿದೆ. ಭಾರತೀಯ ರಾಯಭಾರ ಕಚೇರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮದೀಹಾ ಹೇಳಿದರು. ಹಾವೇರಿಯ ನವೀನ್ ಸಾವಿನ ಸುದ್ದಿ ಕೇಳಿ ತುಂಬಾ ಬೇಸರವಾಗಿದೆ. ಉಳಿದ ವಿದ್ಯಾರ್ಥಿಗಳನ್ಬು ಕೂಡ ಸರ್ಕಾರ ಆದಷ್ಟು ಬೇಗ ರಕ್ಷಿಸಿ ಕರೆತರಬೇಕು ಎಂದು ಅವರು ಮನವಿ ಮಾಡಿದರು.

Join Whatsapp