ಕ್ರಿಮಿನಲ್ ಗೂಂಡಾ ಜ್ಯೋತಿಷ್ ಆತ್ಮಹತ್ಯೆ- ಪ್ರಚೋದನಾಕಾರಿ ಫ್ಲೆಕ್ಸ್ ಸ್ಥಾಪಿಸಿ ಕೋಮುಗಲಭೆಗೆ ಆರೆಸ್ಸೆಸ್ ಹುನ್ನಾರ: ಎಸ್.ಡಿ.ಪಿ.ಐ

Prasthutha|

ಮಂಜೇಶ್ಚರ: ವಾರಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಕುಖ್ಯಾತ ಕ್ರಿಮಿನಲ್ ಹಾಗೂ ಕೊಲೆ ಆರೋಪಿ, ರೌಡಿ ಶೀಟರ್ ಜೋತಿಷ್ ಎಂಬವನ ಹೆಸರಲ್ಲಿ ಜಿಲ್ಲೆಯ ವಿವಿಧೆಡೆ ಕೋಮು ಸಂಘರ್ಷಕ್ಕೆ ಕಾರಣವಾಗುವ ರೀತಿಯಲ್ಲಿ ಪ್ರಚೋದನಾಕಾರಿ ಬರವಣಿಗೆಯಿರುವ ಫ್ಲೆಕ್ಸ್ ಹಾಕಿ ಕೋಮುಗಲಭೆಗೆ ಆರ್ ಎಸ್ ಎಸ್ ಷಡ್ಯಂತರ ರೂಪಿಸಿದೆ ಎಂದು ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲ ಸಮಿತಿ ಗಂಭೀರ ಆರೋಪ ಮಾಡಿದೆ.

- Advertisement -

ಒಬ್ಬ ಗೂಂಡಾ ಕ್ರಿಮಿನಲ್ ಆತ್ಮಹತ್ಯೆಯನ್ನು ವೈಭವೀಕರಿಸಿ ಶಾಂತಿ ಸಮಾಧಾನದಿಂದಿರುವ ಜಿಲ್ಲೆಯನ್ನು ರಕ್ತದೋಕುಳಿ ಹರಿಸುವ ಆರ್ ಎಸ್ ಎಸ್ ನ ಷಡ್ಯಂತರವನ್ನು ವಿಫಲಗೊಳಿಸಲು ಮತ್ತು  ದ್ವೇಷಪೂರಿತ ಬರಹಗಳಿಂದ ಇಡೀ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡುವ ರೀತಿಯಲ್ಲಿ ಫ್ಲೆಕ್ಸ್ ಹಾಕಿರುವುದನ್ನು ತೆರವುಗೊಳಿಸಲು ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು. ಈ ರೀತಿಯ ಕೋಮುಗಲಭೆಗಳಿಗೆ ವೇದಿಕೆ ಸಿದ್ಧಪಡಿಸುವ ಆರ್ ಎಸ್ ಎಸ್ ಸಂಘ ಪರಿವಾರದವರ ಷಡ್ಯಂತರಗಳನ್ನು ನಾಡಿನ ಜಾತ್ಯತೀತ ನಾಗರಿಕರು ಅರ್ಥೈಸಬೇಕೆಂದು ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp