ಇಸ್ಲಾಮೋಫೋಬಿಯಾದ ವಿರುದ್ಧ ಹೋರಾಟ ಮುಂದುವರಿಯಲಿದೆ: ಫ್ರೆಟರ್ನಿಟಿ ಮೂವ್ಮೆಂಟ್

Prasthutha|

ಮಲಪ್ಪುರಮ್: ಮುಸ್ಲಿಮ್ ಎಂಬ ಕಾರಣಕ್ಕೆ ಗುರಿಯಾಗಿಸಲಾಗುತ್ತಿರುವುದು ನಮಗೆ ತಿಳಿದಿದೆ ಎಂದು ಆರೋಪಿಸಿರುವ ವಿದ್ಯಾರ್ಥಿ ಸಂಘಟನೆಯಾದ ಫ್ರೆಟರ್ನಿಟಿ ಮೂವ್ಮೆಂಟ್ ನ ಮುಖಂಡರಾದ ಆಯಿಶಾ ರೆನ್ನಾ, ಲದೀದಾ ಫರ್ಝಾನ ಮತ್ತು ನಿಧಾ ಪರ್ವೀನ್, ಇಸ್ಲಾಮೋಫೋಬಿಯಾದ ವಿರುದ್ಧ ಹೋರಾಟ ಮುಂದುವರಿಸಲಿದ್ದೇವೆ ಎಂದು ಘೋಷಿಸಿದ್ದಾರೆ.

- Advertisement -

ಮಂಗಳವಾರ ಕೇರಳದ ಕ್ಯಾಲಿಕಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈ ಮೂವರು ವಿದ್ಯಾರ್ಥಿ ಮುಖಂಡರು, ಸುಲ್ಲಿಡೀಲ್ಸ್ ಮತ್ತು ಬುಲ್ಲಿಬಾಯಿ ಆ್ಯಪ್‌ ಗಳ ಮೂಲಕ ಮುಸ್ಲಿಮ್ ಮಹಿಳೆಯರನ್ನು ಗುರಿಯಾಗಿಸುತ್ತಿರುವ ನಡೆಯ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿದ್ದಾರೆ.

ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಮುಸ್ಲಿಮ್ ವಿರೋಧಿ ದ್ವೇಷ ಮತ್ತು ಆಯ್ದ ಲಿಂಗ ತಾರತಮ್ಯವನ್ನು ಪ್ರತಿಪಾದಿಸುವ 80 ಕ್ಕೂ ಅಧಿಕ ಮುಸ್ಲಿಮ್ ಮಹಿಳೆಯರ ಫೋಟೋಗಳನ್ನು ಸುಲ್ಲಿ ಡೀಲ್ಸ್ ಮತ್ತು ಬುಲ್ಲಿ ಬಾಯಿ ಆ್ಯಪ್‌ ನಲ್ಲಿ ಅಪ್ಲೋಡ್ ಮಾಡಿಕೊಂಡು ಮಾರಾಟಕ್ಕಿರುವವರು ಎಂದು ಪ್ರಚಾರಪಡಿಸಿ ಆ್ಯಪ್‌ ಗಳ ಮೂಲಕ ಹಂಚಿಕೊಂಡಿದ್ದರು.

- Advertisement -

ಮುಸ್ಲಿಮ್ ಮಹಿಳೆಯರನ್ನು ಗುರಿಯಾಗಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಸರ್ವೋಚ್ಚ ನ್ಯಾಯಾಲಯವು ಸುಮೋಟೋ ಪ್ರಕರಣ ದಾಖಲಿಸಬೇಕೆಂದು ಫ್ರೆಟರ್ನಿಟಿ ಮೂವ್ಮೆಂಟ್ ರಾಷ್ಟ್ರೀಯ ಕಾರ್ಯದರ್ಶಿ ರೆನ್ನಾ ಆಗ್ರಹಿಸಿದ್ದಾರೆ.

ಕಳೆದ ಬಾರಿ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹನ್ನೆರಡು ಅಧಿಕ ದೂರು ನೀಡಿದ ಪೈಕಿ ಎರಡು ಎಫ್.ಐ.ಆರ್ ದಾಖಲಾಗಿದ್ದರೂ ಕೂಡ ಆರೋಪಿಗಳ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ ಎಂದು ಅವರು ಗುಡುಗಿದರು.

ಪತ್ರಿಕಾಗೋಷ್ಠಿಯಲ್ಲಿ ಫ್ರೆಟರ್ನಿಟಿ ಮೂವ್ಮೆಂಟ್ ಕೇರಳ ಕಾರ್ಯದರ್ಶಿ ನುಜೈಮ್ ಪಿ.ಕೆ, ಕಣ್ಣೂರು ಜಿಲ್ಲಾಧ್ಯಕ್ಷೆ ಲುಬೈಬ್ ಬಶೀರ್ ಉಪಸ್ಥಿತರಿದ್ದರು.



Join Whatsapp