ಕೊಡಗು: ಆಧಾರ್ ಕಾರ್ಡ್ ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಕರವೇ

Prasthutha|

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿ ಇರುವ ಬಿಎಸ್ ಎನ್ ಎಲ್ ಸೆಂಟರ್ ನಲ್ಲಿರುವ ಆಧಾರ್ ಕಾರ್ಡ್ ಮಾಡಿಸಲು ಬರುವ ವ್ಯಕ್ತಿಗಳಿಗೆ ಹಣದ ಸುಲಿಗೆ ನಡೆಯುತಿರುವ ಆರೋಪ ಕೇಳಿ ಬಂದಿದೆ.

- Advertisement -

ಆಧಾರ್ ಕಾರ್ಡ್ ಮಾಡಿಸಲು ಹೋದ ವ್ಯಕ್ತಿಯನ್ನು ಸೆಂಟರ್ ನ ಸಿಬ್ಬಂದಿ ಹಣ ಕೇಳಿರುವ ಬಗ್ಗೆ ಎಂದು ಕರವೇ ಕಾರ್ಯಕರ್ತರಿಗೆ  ತಿಳಿಸಿದ್ದಾರೆ.

ವ್ಯಕ್ತಿಯಿಂದ ಮಾಹಿತಿ ಪಡೆದ ಕರವೇ ಕಾರ್ಯಕತರು ಆಧಾರ್ ಸೆಂಟರ್ ಗೆ ಭೇಟಿ ನೀಡಿ ವಿಚಾರಿಸಿದಾಗ ಇಲ್ಲಿ ಹಣದ ಸುಲಿಗೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇ-ಆಧಾರ್ ಕೇಂದ್ರದಲ್ಲಿ ಒಂದು ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಸಲು 500 ರೂ. ಗಳು ನೀಡಲೇಬೇಕು. ಅಲ್ಲದೆ ಪಕ್ಕದಲ್ಲೇ ಇರುವ ಪುಷ್ಪಾ ಜೆರಾಕ್ಸ್ ಅಂಗಡಿಗಳಲ್ಲಿ ಆಧಾರ್ ಕಾರ್ಡ್ ಫಾರಂ ಮತ್ತು ಫಾರಂ ಭರ್ತಿ ಮಾಡುವುದಕ್ಕೆ ಹಾಗೂ ಆಧಾರ್ ಕಾರ್ಡ್ ಮಾಡಿಸಿದ ಮೇಲೆ ಆಧಾರ್ ಕಾರ್ಡ್ ತೆಗೆದುಕೊಡುವುದಕ್ಕೆ ಮೊದಲೇ ಒಟ್ಟು 120 ರಿಂದ 150ವರೆಗೆ ತೆಗೆದುಕೊಳ್ಳುತ್ತಿದ್ದಾರೆ. ಆಧಾರ್ ಕಾರ್ಡ್ ಗೆ ಗೆಜೆಟೆಡ್ ಅಧಿಕಾರಿಗಳು ಗ್ರೀನ್ ಇಂಕ್ ಸೈನ್ ಮಾಡುವುದಕ್ಕೆ 100 ರೂ. ಪಡೆದುಕೊಳ್ಳುತ್ತಿರುವುದು ಪತ್ತೆಯಾಗಿದೆ ಎಂದು ಕರವೇ ಕಾರ್ಯಕರ್ತರು ಆರೋಪಿಸಿದ್ದಾರೆ.

- Advertisement -

ಒಬ್ಬ ವ್ಯಕ್ತಿ ಆಧಾರ್ ಕಾರ್ಡ್ ಮಾಡಲು 800 ರೂಗಳು ಖರ್ಚು ಮಾಡಬೇಕಾಗುತ್ತದೆ. ಮಕ್ಕಳ ಆಧಾರ್ ಕಾರ್ಡ್ ಗೆ ಉಚಿತವಾಗಿ ಮಾಡಿಕೊಡಬೇಕು ಎಂಬ ಸರ್ಕಾರದ ಆದೇಶದಂತೆ ಹಾಗೂ ಫೋನ್ ನಂಬರ್ ಬೇರೆ ಹಾಕಲು ಸರ್ಕಾರದ ಆದೇಶದಂತೆ 50 ರೂ. ಗಳನ್ನು ಕೊಡಬೇಕು ಹಾಗೂ ಜಿಎಸ್ ಟಿ ಬಿಲ್ ನಲ್ಲಿ ಹೇಗಿರುತ್ತದೋ ಅಷ್ಟು ಹಣವನ್ನು ಮಾತ್ರ ತೆಗೆದುಕೊಳ್ಳಬೇಕು ಎಂದು ಕರವೇ ಕಾರ್ಯಕರ್ತರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇದೇ ಸಮಯದಲ್ಲಿ ಆಧಾರ್ ಸೆಂಟರ್ ಅನ್ನು ಗುತ್ತಿಗೆ ಆಧಾರದಲ್ಲಿ ನಡೆಸುತ್ತಿರುವ ಶರತ್ ಎಂಬವರಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಅದೇ ಕೇಂದ್ರದ ಮುಂಭಾಗ ನಾಮಫಲಕ ಅಳವಡಿಸಬೇಕು. ಗ್ರೀನ್ ಇಂಕ್ ಸೈನ್ ಮಾಡುತ್ತಿರುವವರಿಗೆ ಫೋನ್ ನಲ್ಲಿ ಸಂಪರ್ಕ ಮಾಡಿ ಇನ್ನು ಮುಂದೆ ಯಾರಿಗೂ ಹಣ ತೆಗೆದುಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ. ಇಂತಹ ಪ್ರಕರಣಗಳು ಮತ್ತೆ ಬೆಳಕಿಗೆ ಬಂದರೆ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Join Whatsapp