ಬೆಳ್ತಂಗಡಿ: ಈಜಲು ನದಿಗಿಳಿದ ವಿದ್ಯಾರ್ಥಿ ನೀರುಪಾಲು

Prasthutha: December 10, 2021

ಉಜಿರೆ: ಈಜಾಡಲು ನೀರಿಗಿಳಿದ ಯುವಕ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಮೃತ ಯುವಕನನ್ನು ಸಮರ್ಥ್ ಗೌಡ (16) ಎಂದು ಗುರುತಿಸಲಾಗಿದ್ದು, ಈತ ಗುರುದೇವ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ ಎಂದು ಹೇಳಲಾಗಿದೆ.

ಮೂಲತಃ ಮೂಡಿಗೆರೆ ನಿವಾಸಿಯಾದ ಸಮರ್ಥ್, ಬೆಳ್ತಂಗಡಿ ಸಮೀಪದ ಸುದೆಮುಗೇರು ಸಂಜಯ ನಗರದ ಬಳಿಯ ಪಿಜಿಯಲ್ಲಿ ವಾಸವಾಗಿದ್ದನು.

ಇಂದು ಮಧ್ಯಾಹ್ನ ಪಿಜಿಯಿಂದ ಕಾಲೇಜ್ ಗೆ ಹೊರಟ ಈತ ತನ್ನ ಇನ್ನೊಬ್ಬ ಸ್ನೇಹಿತನೊಂದಿಗೆ ಹಿಂದೂ ರುಧ್ರಭೂಮಿ ಸಮೀಪ ಸೋಮವತಿ ನದಿಗೆ ಈಜಾಡಲು ಇಳಿದಿದ್ದರು. ಸ್ಥಳೀಯರಲ್ಲದ ಕಾರಣ ಅಪಾಯಕಾರಿ ಗುಂಡಿಗೆ ಬಿದ್ದು ಈತ ಮುಳುಗಿದ್ದಾನೆ‌. ಸ್ನೇಹಿತ ಕಾಣದಿದ್ದಾಗ ಪೋಲಿಸ್ ಠಾಣೆ, ಕಾಲೇಜ್ ಉಪನ್ಯಾಸಕರಿಗೆ ಮಾಹಿತಿ ನೀಡಿದ್ದಾನೆ. ಪೋಲಿಸರು, ಉಪನ್ಯಾಸಕರ ಸಮ್ಮುಖದಲ್ಲಿ ಲಾಯಿಲ ಗ್ರಾಮದ ಮುಳುಗು ತಜ್ಞರಾದ ದಾವೂದ್ ಹಾಗೂ ಹಕೀಂ ಅವರು ಶವವನ್ನು ಮೇಲಕ್ಕೆತ್ತಿದರು. ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇಡಲಾಗಿದೆ. ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ನಗರದ ಸ್ಮಶಾನದ ಬಳಿಯಿರುವ ನದಿಯಲ್ಲಿ ಶುಕ್ರವಾರ ಮಧ್ಯಾಹ್ನ ಈಜಲು ತೆರಳಿದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳೀಯರು ಯುವಕನನ್ನು ರಕ್ಷಿಸಲು ಪ್ರಯತ್ನಿಸಿದರಾದರೂ, ಅಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!