ರೈಲಿಗೆ ಸಿಕ್ಕಿ ವಿದ್ಯಾರ್ಥಿನಿ ಸಾವು; ವಿದ್ಯಾರ್ಥಿಗಳಿಂದ ದಿಢೀರ್ ರಸ್ತೆತಡೆ: ಬೆಂಕಿ ಹಚ್ಚಿ ಆಕ್ರೋಶ

Prasthutha|

ಹಾಸನ: ಕಾಲು ಜಾರಿ ರೈಲ್ವೆ ಹಳಿ ಮೇಲೆ ಬಿದ್ದ ವಿದ್ಯಾರ್ಥಿನಿ ಮೇಲೆ ರೈಲು ಹರಿದು ಸ್ಥಳದಲ್ಲೇ ದಾರುಣವಾಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲುಕಿನ ಅಂಕಪುರ ಗ್ರಾಮದ ಬಳಿ ಇಂದು ನಡೆದಿದೆ.

- Advertisement -

ಗುಡ್ಡೆ ತೆರಣ್ಯ ಗ್ರಾಮದ ಪ್ರೀತಿ (16) ಮೃತ ವಿದ್ಯಾರ್ಥಿನಿ.ಮೊಸಳೆ ಹೊಸಳ್ಳಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರೀತಿ, ಬೆಳಗ್ಗೆ ಕಾಲೇಜಿಗೆ ತೆರಳುವಾಗ ರೈಲು ಹಳಿ ದಾಟಲು ನಿಂತಿದ್ದಳು. ಈ ವೇಳೆ ಆಯತಪ್ಪಿ ಕಾಲು ಜಾರಿ ರೈಲ್ವೆ ಹಳಿ ಮೇಲೆ ಬಿದಿದ್ದಾಳೆ. ಅದೇ ವೇಳೆಗೆ ರೈಲು ಬಂದಿದ್ದರಿಂದ ಈ ದುರಂತ ಘಟಿಸಿದೆ. ಸ್ಥಳಕ್ಕೆ ರೈಲ್ವೇ  ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ವಿದ್ಯಾರ್ಥಿನಿ ದುರಂತ ಸಾವು ಖಂಡಿಸಿ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ 306 ರಲ್ಲಿ ರಸ್ತೆ ತಡೆದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಾವಿಗೆ ರೈಲ್ವೇ  ಇಲಾಖೆ ನಿರ್ಲಕ್ಷ್ಯ ಕಾರಣ ಎಂದು ದೂರಿದ ಪ್ರತಿಭಟನಾಕಾರರು, ಕೂಡಲೇ ರೈಲ್ವೇ  ಮೇಲ್ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ಸಂಚಾರ ಬಂದ್ ಆಗಿತ್ತು. ಶಾಂತಿಗ್ರಾಮ ಸಿಪಿಐ ಸುರೇಶ್ ಪಿ ಹಾಗೂ ಗೊರೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

Join Whatsapp