ಜಿಲ್ಲೆಯಲ್ಲಿ ನಡೆದ ಕೊಲೆಗಳ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಲು ಯು.ಟಿ. ಖಾದರ್ ಆಗ್ರಹ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮೂರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ತ್ವರಿತ ನ್ಯಾಯಾಲಯವನ್ನು ಸ್ಥಾಪಿಸಬೇಕೆಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.

- Advertisement -

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕೊಲೆಗಳ ಮೂಲಕ ತಮ್ಮ ಮಕ್ಕಳನ್ನು ಕಳೆದುಕೊಂಡ ತಾಯಂದಿರ ನೋವು ಮಾಸುವ ಮೊದಲು ಅವರ ಕುಟುಂಬಗಳಿಗೆ ನ್ಯಾಯ ಲಭಿಸಬೇಕು. ಈ ನಿಟ್ಟಿನಲ್ಲಿ ತ್ವರಿತ ನ್ಯಾಯಾಲಯ ಸ್ಥಾಪಿಸಿ ಮುಂದಿನ ಆರು ತಿಂಗಳೊಳಗೆ ಈ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕೆಂದು ಮನವಿ ಮಾಡಿದರು.

ಕೇವಲ ಪ್ರವೀಣ್ ನೆಟ್ಟಾರು ಪ್ರಕರಣದ ವಿಚಾರಣೆಯನ್ನು ಸರ್ಕಾರ NIA ಗೆ ವಹಿಸಿರುವುದರಿಂದ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಲಭಿಸಲಿದೆಯೇ? ಇಲ್ಲಿಯ ತನಕ ರಾಜ್ಯದಲ್ಲಿ ಐದಕ್ಕೂ ಅಧಿಕ ಪ್ರಕರಣಗಳನ್ನು NIA ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇದರ ಫಲಿತಾಂಶ ಏನೆಂದು ಸರ್ಕಾರ ಬಹಿರಂಗಪಡಿಸಲಿ. ಜೊತೆಗೆ ಇಲ್ಲಿ ನಡೆದ ಎಲ್ಲಾ ಮೂರು ಕೊಲೆಗಳನ್ನು ಸರ್ಕಾರ NIA ವಹಿಸಿ ರಾಜಧರ್ಮ ಪಾಲಿಸಲಿ ಎಂದು ತಿಳಿಸಿದರು.

- Advertisement -

ರಾಜ್ಯದಲ್ಲಿ ಮುಂದಕ್ಕೆ ಮತೀಯ ಗಲಭೆಯನ್ನು ತಡೆಯುವ ನಿಟ್ಟಿನಲ್ಲಿ ಕೋಮುಹಿಂಸೆ ತಡೆ ಮಸೂದೆಯನ್ನು ಜಾರಿಗೆ ತರಲಿ ಎಂದು ಸಲಹೆ ಕೂಡ ಯುಟಿಕೆ ನೀಡಿದರು.

Join Whatsapp