ಚೀನಾದಲ್ಲಿ ಪ್ರಬಲ ಭೂಕಂಪನ: ದೆಹಲಿಯಲ್ಲೂ ಕಂಪಿಸಿದ ಭೂಮಿ!

Prasthutha|

ಚೀನಾ: ಚೀನಾದ ಉತ್ತರ ವಲಯವಾದ ಕ್ಸಿಂಗ್ ಜಿಯಾಂಗ್ ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಇದರ ಬೆನ್ನಲ್ಲೇ ಭಾರತದ ರಾಜಧಾನಿ ದೆಹಲಿಯಲ್ಲೂ ಭೂಮಿ ಕಂಪನದ ಅನುಭವದ ವರದಿಗಳು ಬಂದಿವೆ.

- Advertisement -

ರಾತ್ರಿ 11.39ರ ಸುಮಾರಿಗೆ ಚೀನಾದ ಕ್ಸಿಂಗ್ ಜಿಯಾಂಗ್ ನಗರದಲ್ಲಿ ರಿಕ್ಟರ್ ಮಾಪಕದಲ್ಲಿ 7.2ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ.

ಭೂಮಿಯಿಂದ 80 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ.

- Advertisement -

ಜನವರಿ 11ರಂದು ಆಫ್ಘಾನಿಸ್ತಾನದಲ್ಲಿ 6.1ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದ್ದು, ಇದರ ಬೆನ್ನಲ್ಲೇ ದೆಹಲಿಯಲ್ಲೂ ಭೂಮಿ ಕಂಪಿಸಿತ್ತು. ಇದೀಗ ಚೀನಾದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಅದರ ಪರಿಣಾಮ ದೆಹಲಿಯಲ್ಲೂ ಕಂಡುಬಂದಿದೆ.

ಸೋಮವಾರ ಬೆಳಿಗ್ಗೆ ಉತ್ತರ ಚೀನಾದ ಪರ್ವತಗಳ ನಡುವೆ ಪ್ರಬಲ ಭೂಕಂಪನ ಸಂಭವಿಸಿದ್ದು, 47 ಮಂದಿ ಮೃತಪಟ್ಟಿದ್ದರು. ಅಲ್ಲದೇ 200ಕ್ಕೂ ಹೆಚ್ಚು ಮಂದಿಯನ್ನು ಕೂಡಲೇ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿತ್ತು.



Join Whatsapp