ಚಾರಣಕ್ಕೆ ಅನ್‌ ಲೈನ್‌ ಟಿಕೆಟ್‌: ಅರಣ್ಯ ವಿಹಾರ ವೆಬ್‌ ಸೈಟ್‌ ಲೋಕಾರ್ಪಣೆ

Prasthutha|

ಬೆಂಗಳೂರು: ರಾಜ್ಯದ ಎಲ್ಲ ಚಾರಣ ಕೈಗೊಳ್ಳುವ ಸ್ಥಳಗಳಿಗೆ ಒಂದೇ ವೇದಿಕೆಯಲ್ಲಿ ಟಿಕೆಟ್‌ ಖರೀದಿಸುವ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಆರಂಭಿಸಿದ ಅರಣ್ಯ ವಿಹಾರ ವೆಬ್‌ ಸೈಟ್‌ ಗೆ ಇಂದು ಚಾಲನೆ ನೀಡಲಾಗಿದೆ.

- Advertisement -

ವಿಕಾಸ ಸೌಧದಲ್ಲಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಅರಣ್ಯ ವಿಹಾರ ವೆಬ್‌ಸೈಟ್‌ ಲೋಕಾರ್ಪಣೆ ಮಾಡಿದರು. ಒಂದು ಬಾರಿಗೆ 300 ಜನರಿಗೆ ಅವಕಾಶ ಸಿಗಲಿದ್ದು, ಸಂಚಾರ ದಟ್ಟಣೆ ಸೇರಿ ವಿವಿಧ ಕಾರಣಕ್ಕೆ ಮಿತಿ ಹಾಕಲಾಗಿದೆ.

40 ಲಕ್ಷ ರೂ. ಮೊತ್ತದಲ್ಲಿ ಅಂತರ್ಜಾಲ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಐದು ಚಾರಣ ಪಥ ಇದೆ. ಇನ್ನೂ 18 ಚಾರಣ ಪಥ ಆಗಬೇಕು. ರಾಜ್ಯದಲ್ಲಿ 40 ಚಾರಣ ಪಥ ಗುರುತಿಸಬಹುದು. ಎಲ್ಲಾ ಚಾರಣ ಪ್ರದೇಶಗಳಿಗೆ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.



Join Whatsapp