ನಾಟಕ ನಿಲ್ಲಿಸಿ ಪೂಂಜನನ್ನು ಬಂಧಿಸಿ: ಅನ್ವರ್ ಸಾದತ್

Prasthutha|

ಮಂಗಳೂರು: DJ ಹಳ್ಳಿ KJ ಹಳ್ಳಿ ಠಾಣೆಗೆ ಆದ ಗತಿಯೇ ಬೆಳ್ತಂಗಡಿ ಠಾಣೆಗೂ ಆಗಲಿದೆ ಎಂದು ಬೆದರಿಕೆ ಒಡ್ಡಿದ ಬಿಜೆಪಿ ಶಾಸಕ ಹರೀಶ್ ಪೂಂಜ ಪೊಲೀಸರ ಸಮ್ಮುಖದಲ್ಲೇ ಇದ್ದರೂ ಬಂಧನ ಯಾಕಿಲ್ಲ. ನಾಟಕ ನಿಲ್ಲಿಸಿ ಪೂಂಜನನ್ನು ಬಂಧಿಸಿ ಎಂದು ಎಸ್‌ ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಹೇಳಿದ್ದಾರೆ.

- Advertisement -

ಈ ಬಗ್ಗೆ ಎಕ್ಸ್ ಮಾಡಿರುವ ಅವರು, 400 ಕ್ಕೂ ಹೆಚ್ಚು  ಮಹಿಳೆಯರ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ಊರಲ್ಲಿ ಇಲ್ಲ  ಎಂಬ ಕಾರಣಕ್ಕೆ ಬಂಧಿಸಿಲ್ಲ ಎಂದು ಹೇಳುವ ಸರ್ಕಾರ ಮತ್ತು ಪೋಲಿಸ್ ಇಲಾಖೆ  ಠಾಣೆಗೆ ನುಗ್ಗಿ ಪೋಲೀಸರ ಅಪ್ಪಂದಿರಿಗೆ ಬೈದು ಮರುದಿನ ಪ್ರತಿಭಟನೆಯಲ್ಲಿ ಪೋಲೀಸರ ಮತ್ತು ತಹಶಿಲ್ದಾರರಿಗೆ ಸವಾಲು ಹಾಕಿದ್ದು ಅಲ್ಲದೆ  DJ ಹಳ್ಳಿ KJ ಹಳ್ಳಿ ಠಾಣೆಗೆ ಆದ ಗತಿಯೇ ಬೆಳ್ತಂಗಡಿ ಠಾಣೆಗೂ ಆಗಲಿದೆ ಎಂದು ಬೆದರಿಕೆ ಒಡ್ಡಿದ ಹರೀಶ್ ಪೂಂಜಾ ಪೋಲೀಸರ ಸಮ್ಮುಖದಲ್ಲೇ ಇದ್ದರೂ ಬಂಧನ ಯಾಕಿಲ್ಲ? ನಾಟಕ ನಿಲ್ಲಿಸಿ ಪೂಂಜಾನನ್ನು ಬಂಧಿಸಿ ಎಂದು ಹೇಳಿದ್ದಾರೆ.

Join Whatsapp