ಮೀರತ್: ಅಲಿಗಢ ಮುಸ್ಲಿಮ್ ವಿಶ್ವವಿದ್ಯಾನಿಲಯದ ನೂರಾರು ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿ ಜಮಾವಣೆಗೊಂಡು “ರಾಜ್ಯದಲ್ಲಿ ವ್ಯಾಪಕವಾದ ಹಿಂಸಾಚಾರ ಮತ್ತು ಅಸ್ಸಾಂ ನಲ್ಲಿ ನಡೆದ ಅಮಾನವೀಯ ಘಟನೆಯಲ್ಲಿ ಪೊಲೀಸರು ಮುಸ್ಲಿಮರ ಹತ್ಯೆ , ಉತ್ತರಪ್ರದೇಶದಲ್ಲಿ ಮುಸ್ಲಿಮ್ ವಿದ್ವಾಂಸರೊಬ್ಬರ ಬಂಧನ” ವನ್ನು ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಎ.ಎಂ.ಯು ವಿದ್ಯಾರ್ಥಿಗಳ ಗುಂಪೊಂದು ವಿಶ್ವವಿದ್ಯಾನಿಲಯದ ಜಾಮಿಯಾ ಮಸೀದಿಯಿಂದ ಬಾಬ್ – ಇ – ಸೈಯದ್ ಗೇಟ್ ವರೆಗೆ ಬೃಹತ್ ಪ್ರತಿಭಟನಾ ಜಾಥಾವನ್ನು ಕೈಗೊಂಡರು. ಅಸ್ಸಾಂ ಮುಸ್ಲಿಮರ ಮೇಲಿನ ದಾಳಿನ ತಕ್ಷಣವೇ ನಿಲ್ಲಿಸಬೇಕು ಮತ್ತು ಮೌಲಾನಾ ಕಲೀಮ್ ಸಿದ್ದೀಕಿ, ಉಮರ್ ಗೌತಮ್ ಸೇರಿದಂತೆ ಮುಸ್ಲಿಮ್ ವಿದ್ವಾಂಸರನ್ನು ಬೇಷರತ್ತಾಗಿ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟರ್ ಮೂಲಕ ರಾಷ್ಟ್ರಪತಿಗೆ ವಿಜ್ಞಾಪನಾ ಪತ್ರವನ್ನು ಸಲ್ಲಿಸಿದ್ದರು.