ಮಂಗಳೂರಿನ ಬಾವುಟ ಗುಡ್ಡೆಗೆ ಬಂದ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ

Prasthutha|

ಮಂಗಳೂರು: 1837ರ ಅಮರ ಸುಳ್ಯ ದಂಗೆ, ಕಲ್ಯಾಣಪ್ಪ ಕಾಟಕಾಯಿ ಇತ್ಯಾದಿ ಹೆಸರುಗಳಿಂದ ಕರೆಯಲಾದ ಅಷ್ಟಾಗಿ ದಾಖಲಾಗದ ಕರಾವಳಿ ಮಲೆನಾಡಿನ ಸ್ವಾತಂತ್ರ್ಯ ಹೋರಾಟದ ವೀರರಲ್ಲಿ ಒಬ್ಬರಾದ ಕೆದಂಬಾಡಿ ರಾಮಗೌಡ ಅವರ ಕಂಚಿನ ಪ್ರತಿಮೆಯು ಸೋಮವಾರ ಮಂಗಳೂರು ನಗರದ ಬಾವುಟ ಗುಡ್ಡೆಗೆ ಆಗಮಿಸಿತು.

- Advertisement -

ಕರ್ನಾಟಕ ರಾಜ್ಯದ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ರಾಮಯ್ಯ ಗೌಡರ ಪ್ರತಿಮೆ ನಿರ್ಮಿಸಿ, ನಗರಕ್ಕೆ ತರಲಾಗಿದೆ.

ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಈ ಕಂಚಿನ ಪ್ರತಿಮೆಯನ್ನು 40 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಿಸಿದ್ದು, ಮನಪಾ ರೂ. 30 ಲಕ್ಷ ನೀಡಿದೆ.

- Advertisement -

1837ರ ಏಪ್ರಿಲ್ 3ರಂದು ಬಂಗ, ಬಯ್ದ, ಹೆಗ್ಗಡೆ ಸಹಿತದ ಕೆದಂಬಾಡಿ ರಾಮಯ್ಯ ಗೌಡ ಮತ್ತು ಹುಲಿಕೊಂದ ನಂಜಯ್ಯ ನೇತೃತ್ವದ ಸೇನೆಯು ಮಂಗಳೂರನ್ನು ಗೆದ್ದು ಬಾವುಟ ಗುಡ್ಡೆಯಲ್ಲಿ ಹಾಲೇರಿ ಧ್ವಜವನ್ನು ಹಾರಿಸಿತ್ತು. 13 ದಿನಗಳ ಬಳಿಕ ಬ್ರಿಟಿಷರು ಇದನ್ನು ವಶಪಡಿಸಿಕೊಂಡು ಬಂಗ ರಾಜ, ಕಲ್ಯಾಣಸ್ವಾಮಿ ಮೊದಲಾದವರನ್ನು ಭೀಕರ ರಣ ಕಟ್ಟೆಯಾಗಿದ್ದ ಬಿಕರ್ನಕಟ್ಟೆಯಲ್ಲಿ ನೇಣಿಗೇರಿಸಿದ್ದರು.

ಆ ವೀರ ಹೋರಾಟದ ಒಬ್ಬ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಈಗ ಬಾವುಟ ಗುಡ್ಡೆಯಲ್ಲಿ  ಪ್ರತಿಷ್ಠಾಪನೆಗೊಳ್ಳಲಿದೆ.

Join Whatsapp