ಭೀಕರ ಚಂಡಮಾರುತಕ್ಕೆ ನಲುಗಿದ ನ್ಯೂಯಾರ್ಕ್ ಸಿಟಿ : ತುರ್ತು ಪರಿಸ್ಥಿತಿ ಘೋಷಿಸಿದ ಪ್ರಾಧಿಕಾರ

Prasthutha|

ನ್ಯೂಯಾರ್ಕ್: ನ್ಯೂಯಾರ್ಕ್ ಸಿಟಿ ಮತ್ತು ಈಶಾನ್ಯ ಅಮೆರಿಕದಲ್ಲಿ ಉಂಟಾದ ಭೀಕರ ಇಡಾ ಚಂಡಮಾರುತ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ಗವರ್ನರ್ ಕ್ಯಾತಿ ಹೋಚುಲ್ ಅವರು ಗುರುವಾರ ತುರ್ತು ಪರಿಸ್ಥಿತಿಯನ್ನು ಹೇರಿ ಆದೇಶ ಹೊರಡಿಸಿದ್ದಾರೆ.

- Advertisement -

ಭೀಕರವಾಗಿರುವ ಇಡಾ ಚಂಡಮಾರುತ ಮತ್ತು ನಂತರ ತಲೆದೋರಿರುವ ಭಾರೀ ಪ್ರವಾಹದಿಂದಾಗಿ ನ್ಯೂಯಾರ್ಕ್ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ಮುಂಜಾನೆಯಿಂದ ತುರ್ತುಪರಿಸ್ಥಿತಿಯನ್ನು ಹೇರಲಾಗಿದೆ ಎಂದು ಹೋಚುಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕಳೆದ ಭಾನುವಾರ ದಕ್ಷಿಣ ಅಮೆರಿಕಕ್ಕೆ ಅಪ್ಪಳಿಸಿದ ಇಡಾ ಚಂಡಮಾರುತ ಮತ್ತು ಪ್ರವಾಹವು ಉತ್ತರಾಭಿಮುಖವಾಗಿ ಚಲಿಸಿ ಅಮೆರಿಕಕ್ಕೆ ಅಪಾರ ನಾಶನಷ್ಟವನ್ನು ತಂದೊಡ್ಡಿದೆ ಎಂದು ಅವರು ತಿಳಿಸಿದರು.

- Advertisement -

Join Whatsapp