ಬಿಗ್ ಬಾಸ್ -13 ವಿನ್ನರ್, ನಟ ಸಿದ್ದಾರ್ಥ ಶುಕ್ಲಾ ನಿಧನ

Prasthutha|

ಮುಂಬೈ: ಬಿಗ್ ಬಾಸ್ -13 ವಿನ್ನರ್, ನಟ ಸಿದ್ದಾರ್ಥ ಶುಕ್ಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು.

ಮುಂಬೈಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಟ ಸಿದ್ದಾರ್ಥ ಮೃತಪಟ್ಟಿರುವುದನ್ನು ಕುಟುಂಬದ ಮೂಲಗಳು ದೃಢಪಡಿಸಿವೆ.

- Advertisement -

ಅವರು ಕಳೆದ ರಾತ್ರಿ ಮಲಗುವ ಮುನ್ನ ಕೆಲವು ಔಷಧಿಗಳನ್ನು ತೆಗೆದುಕೊಂಡಿದ್ದರು. ನಂತರ ಅವರಿಗೆ ಹೃದಯಾಘಾತವಾಗಿದೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಶೀಘ್ರದಲ್ಲಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

 ಅವರು ತಾಯಿ ಮತ್ತು ಇಬ್ಬರು ಸಹೋದರಿಯರು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

- Advertisement -