ಬೆಂಗಳೂರು: ತುಮಕೂರಿನ ಅಮಾನಿಕೆರೆಯ ಗ್ಲಾಸ್ ಹೌಸ್ ನಲ್ಲಿ ನವೆಂಬರ್ 12 ರಿಂದ 14 ರವರೆಗೆ ನಡೆದ 38 ನೇ ಕರ್ನಾಟಕ ರಾಜ್ಯ ಕ್ಯೋರುಗಿ ಟೇಕ್ವಾಂಡೋ ಚಾಂಪಿಯನ್ ಶಿಪ್ 2021 ರಲ್ಲಿ ಮಂಗಳೂರಿನ ಎಂ-ಟೈಗರ್ಸ್ (ದಕ್ಷಿಣ ಕನ್ನಡ ಟೇಕ್ವಾಂಡೋ ಅಸೋಸಿಯೇಷನ್ ನೊಂದಿಗೆ ಸಂಯೋಜಿತ) ಭಾಗವಹಿಸಿದ್ದು, ಮಂಗಳೂರಿನ ಈ ತಂಡ 4 ಚಿನ್ನ, 1 ಬೆಳ್ಳಿ ಮತ್ತು 12 ಕಂಚಿನೊಂದಿಗೆ ಒಟ್ಟು 17 ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಇದೇ ಸ್ಥಳದಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ಓಪನ್ ಚಾಂಪಿಯನ್ ಶಿಪ್ ನಲ್ಲಿ ಎಂ ಟೈಗರ್ಸ್, ಕ್ಯೋರುಗಿಯಲ್ಲಿ 1 ಚಿನ್ನ ಮತ್ತು ಪೂಮ್ಸೆಯಲ್ಲಿ 1 ಚಿನ್ನವನ್ನು ಗೆದ್ದುಕೊಂಡಿದೆ.
ಪುರುಷರ ಸಬ್ ಜೂನಿಯರ್ ವಿಭಾಗದ 7ರಿಂದ 12 ವರ್ಷದ ವಯೋಮಿತಿಯಲ್ಲಿ ಮುಸಾಬ್ ಇಬ್ರಾಹಿಂ ಮುಹಮ್ಮದ್ ಮತ್ತು ಮೊಹಿದ್ದೀನ್ ಅಂಝಾನ್ ಅವರು ಕ್ರಮವಾಗಿ 18 ಮತ್ತು 27 ತೂಕ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
38 ನೇ ರಾಜ್ಯ ಕ್ಯೋರುಗಿ ಮತ್ತು ಪೂಮ್ಸೆ ಟೇಕ್ವಾಂಡೋ ಚಾಂಪಿಯನ್ ಶಿಪ್ – 2021 ರ ಚಿನ್ನದ ಪದಕ ವಿಜೇತರು ಈ ಮೂಲಕ ರಾಷ್ಟ್ರೀಯ ಕ್ಯೋರುಗಿ ಮತ್ತು ಪೂಮ್ಸೆ ಟೇಕ್ವಾಂಡೋ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ. ಮುಂಬರುವ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಎಂ-ಟೈಗರ್ಸ್ ನ ನಾಲ್ವರು ವಿದ್ಯಾರ್ಥಿಗಳು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಈ ತಂಡಕ್ಕೆ ಕೋಚ್ ಆಸಿಫ್ ಕಿನ್ಯ ತರಬೇತಿ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.