ಕೊಡಗು | ಅಕಾಲಿಕ ಮಳೆಗೆ ಹಾನಿಗೊಂಡ ವಾಣಿಜ್ಯ ಬೆಳೆ ಕಾಫಿ, ಭತ್ತ !

Prasthutha|

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ಇದರಿಂದಾಗಿ ವಾಣಿಜ್ಯ ಬೆಳೆ ಕಾಫಿ ಕೊಳೆಯುತ್ತಿದೆ, ಭತ್ತ ತೆನೆ ಹಾನಿಗೊಂಡಿದ್ದು ಕೃಷಿಕ ವರ್ಗ ಕಂಗೆಟ್ಟಿದೆ. ಆರರಿಂದ ಎಂಟು ತಿಂಗಳು ಮಳೆಗಾಲದಲ್ಲೇ ಕಳೆಯುವ ಕೊಡಗು ಜಿಲ್ಲೆ ಉಳಿದ ನಾಲ್ಕಾರು ತಿಂಗಳಲ್ಲಾದರೂ ಚೇತರಿಸಿಕೊಳ್ಳುವ ತವಕದಲ್ಲಿರುತ್ತದೆ. ಆದರೆ ಈ ಬಾರಿ ಈ ನಿರೀಕ್ಷೆಗಳು ಹುಸಿಯಾಗಿದ್ದು, ಮಳೆ ನಿಲ್ಲದೆ ವಾಣಿಜ್ಯ ಬೆಳೆ ಕಾಫಿ ಕೊಳೆಯುತ್ತಿದ್ದು ಭತ್ತ ತೆನೆ ಕಟ್ಟದ ಪರಿಸ್ಥಿತಿಗೆ ಬಂದು ತಲುಪಿದೆ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -

ವನ್ಯಜೀವಿಗಳ ದಾಳಿ ಮತ್ತು ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರಿಗೆ ಹವಾಮಾನದ ವೈಪರೀತ್ಯ ಕೃಷಿಯ ಮೇಲಿನ ಆಸಕ್ತಿಯನ್ನೇ ಕಸಿದುಕೊಂಡಿದೆ. ಮಳೆಯೊಂದಿಗೆ ಮೈಕೊರೆಯುವ ಚಳಿಯೂ ಇದ್ದು, ಬೆಲೆ ಬಾಳುವ ವಸ್ತುಗಳಿಗೂ ಹಾನಿಯಾಗುತ್ತಿದೆ. ವ್ಯಾಪಾರೋದ್ಯಮಿಗಳಿಗೂ ನಷ್ಟವಾಗುತ್ತಿದೆ. ಅತಿಮಳೆಯಿಂದಾಗಿ ಪ್ರವಾಸಿಗರು ಕೂಡ ಕೊಡಗಿನ ಕಡೆ ಮುಖ ಮಾಡದೆ ಇರುವುದರಿಂದ ಪ್ರವಾಸೋದ್ಯಮವನ್ನೇ ನಂಬಿರುವವರಿಗೂ ಸಂಕಷ್ಟ ಎದುರಾಗಿದೆ.

Join Whatsapp