ರಾಜ್ಯದಲ್ಲಿ ನಡೆಯುವ ಅಹಿತಕರ ಘಟನೆಗಳಿಗೆ ರಾಜ್ಯ ಸರ್ಕಾರವೇ ಕಾರಣ: ಡಿ.ಕೆ. ಶಿವಕುಮಾರ್

Prasthutha|

ಬೆಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಅಕ್ಷಮ್ಯ. ಇದರಲ್ಲಿ ರಾಜಕಾರಣವಾಗಲೀ, ಸರ್ಕಾರ ಕ್ರಮಗಳ ವಿಚಾರದಲ್ಲಿ ಹಸ್ತಕ್ಷೇಪವಾಗಲೀ ಯಾರೂ ಮಾಡಬಾರದು. ಕಾನೂನಿನ ಕೆಲಸ ಆಗಬೇಕು. ಸರ್ಕಾರದ ವಿರುದ್ದವೇ ಜನರು ತಿರುಗಿ ಬಿದ್ದಿರುವುದನ್ನು ನಾವು ನಿನ್ನೆ ಗಮನಿಸಿದ್ದೇವೆ. ಸರ್ಕಾರದ ವೈಫಲ್ಯಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯಲು ರಾಜ್ಯ ಸರ್ಕಾರವೇ ಕಾರಣ. ಆರಂಭದಿಂದಲೇ ಸರ್ಕಾರ ಇಂತಹ ಪರಿಸ್ಥಿತಿಗಳನ್ನು ಮಟ್ಟ ಹಾಕಿದ್ದರೆ ರಾಜ್ಯದಲ್ಲಿ ದುಸ್ಥಿತಿಗಳು ಬಂದೆರಗುತ್ತಿರಲಿಲ್ಲ.  ಬಿಜೆಪಿ ಕಾರ್ಯಕರ್ತರು ಸೇರಿದಂತೆ ಯಾರಿಗೂ ರಕ್ಷಣೆ ಇಲ್ಲದಾಗಿದೆ ಎಂದು ಹೇಳಿದ್ದಾರೆ.

ಪೊಲೀಸರನ್ನು ಸ್ವತಂತ್ರವಾಗಿ ತನಿಖೆ ಮಾಡಲು ಬಿಡಬೇಕು. ಅವರ ಮೇಲೆ ರಾಜಕೀಯ ಒತ್ತಡ ಸಲ್ಲದು. ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಯಾಗಬೇಕು ಮತ್ತು ಆ ಕುಟುಂಬಕ್ಕೆ ನ್ಯಾಯ ದೊರಕಬೇಕು. ಕರಾವಳಿ ಭಾಗದಲ್ಲಿ ಮುಂದೆಂದೂ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿ ಸ್ಥಾಪಿಸಲಿ ಎಂದು ಆಗ್ರಹಿಸಿದರು.

Join Whatsapp