e-office ತಂತ್ರಾಂಶದಲ್ಲಿ ಕೆಲಸ ಮಾಡಲು ಎಲ್ಲಾ ಸಚಿವಾಲಯದ ಇಲಾಖೆಗಳಿಗೆ ರಾಜ್ಯ ಸರ್ಕಾರ ಆದೇಶ

Prasthutha|

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯ ಮತ್ತು ಎಲ್ಲಾ ಜಿಲ್ಲಾಧಿಕಾರಿ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಣಾಧಿಕಾರಿಗಳ ಮತ್ತು ಎಲ್ಲಾ ಇಲಾಖೆ ಮುಖ್ಯಸ್ಥರುಗಳ ಕಛೇರಿಗಳಲ್ಲಿ NIC ಅಭಿವೃದ್ಧಿ ಪಡಿಸಿರುವ e-office ತಂತ್ರಾಂಶದಲ್ಲೇ ಕೆಲಸ ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ.

- Advertisement -

 e-office ತಂತ್ರಾಂಶದಲ್ಲಿಯೇ ಎಲ್ಲಾ ಹೊಸ ಕಡತಗಳನ್ನು ಸೃಜಿಸಿ ನಂತರದ ಪ್ರಕ್ರಿಯೆಗಳನ್ನು ಸಹ ಈ ತಂತ್ರಾಂಶದಲ್ಲಿಯೇ ಮಾಡಬೇಕೆಂದು ಸೂಚನೆ ನೀಡಲಾಗಿದೆ.

ಇತ್ತೀಚಿಗೆ ಜರುಗಿದ ಕಾರ್ಯದರ್ಶಿಗಳ ಸಭೆಯಲ್ಲಿ ಕಡತಗಳ ಚಲನವನವನ್ನು ಮತ್ತು ಕಡತಗಳ ನಿರ್ವಹಣಾ ಹಂತಗಳನ್ನು ಕಡಿಮೆ ಮಾಡಲು ಮುಖ್ಯಮಂತ್ರಿಗಳು ನಿರ್ದೇಶಿಸಿರುತ್ತಾರೆ. ಜಿಲ್ಲಾಧಿಕಾರಿಗಳು / ಇಲಾಖಾ ಮುಖ್ಯಸ್ಥರುಗಳಿಂದ ಸ್ವೀಕರಿಸಲಾಗುವ ಪ್ರಸ್ತಾವನೆಗಳನ್ನು ಕಾರ್ಯದರ್ಶಿಗಳ ಹಂತದಲ್ಲಿಯೇ ನಿರ್ವಹಿಸತಕ್ಕದ್ದೆಂದು ಮುಖ್ಯಮಂತ್ರಿಗಳು ಸೂಚಿಸಿರುತ್ತಾರೆ.ಆದ್ದರಿಂದ ಈ ಕೆಳಗಿನಂತೆ ಆದೇಶಿಸಿಸಲಾಗಿದೆ.

- Advertisement -

1. ದಿನಾಂಕ 1-10-21 ರಿಂದ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಇಲಾಖಾ ಮುಖ್ಯಸ್ಥರುಗಳು ತಮ್ಮ ಪ್ರಸ್ತಾವನೆಗಳು, ಪತ್ರಗಳು ಹಾಗೂ ವರದಿಗಳನ್ನು ಸಂಬಂಧಪಟ್ಟ ಸರ್ಕಾರದ ಕಾರ್ಯದರ್ಶಿಗೆ ಪ್ರಸ್ತಾವನೆಗಳನ್ನು ಏಕ ಕಡತ ರೀತಿಯಲ್ಲಿ e-office ಮೂಲಕವೇ ಕಳಿಸಬೇಕು.

2.ಕಾರ್ಯದರ್ಶಿಗಳು ಸಾಧ್ಯವಾದಷ್ಟು ತಮ್ಮ ಮಟ್ಟದಲ್ಲೇ ವಿಷಯವನ್ನು ವಿಲೀನಗೊಳಿಸಬೇಕು.ಅಥವಾ ಸಂಬಂಧಿಸಿದ ಸಚಿವರಿಗೆ ಆದೇಶಕ್ಕಾಗಿ ಸಲ್ಲಿಸಬೇಕು.ವಿಷಯದ ಬಗ್ಗೆ ಹೆಚ್ಚುವರಿ ಮಾಹಿತಿ ಬೇಕಾಗುವಂತ ಅಸಾಧಾರಣ ಪ್ರಕರಣಗಳ e-office ಕಡತಗಳನ್ನು ಅಥವಾ ಸಚಿವ ಸಂಪುಟ ಟಿಪ್ಪಣಿಯನ್ನು ತಯಾರಿಸಿ ಸಚಿವ ಸಂಪುಟದ ಮುಂದೆ ತರಬೇಕಾದ ವಿಷಯಗಳಿಗೆ ಸಂಬಂಧಿಸಿದ ಕಾರ್ಯದರ್ಶಿಗೆ ಸಂಬಂಧಿಸಿದ e-office ಏಕ ಕಡತಗಳನ್ನು ಮಾತ್ರ ಕಾರ್ಯದರ್ಶಿಯವರು ಸಂಬಂಧಿಸಿದ ಉಪ ಕಾರ್ಯದರ್ಶಿಗಳಿಗೆ ಕಳುಹಿಸಬಹುದು.

3.ಅಂತಯೇ ಸಚಿವಾಲಯಕ್ಕೆ ಕಳುಹಿಸುವ ಎಲ್ಲಾ ಪತ್ರಗಳು, ವರದಿಗಳನ್ನು e-office ನಲ್ಲಿ ಸ್ವೀಕೃತಿಗಳಾಗಿ ಕಳಿಸಬೇಕು

4.e-office ವ್ಯವಸ್ಥೆಗೆ ಬದಲಾವಣೆ ಮಾಡಿಕೊಳ್ಳುವಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಈ ಬಗ್ಗೆ ನೆರವು ಪಡೆಯಲು NIC,center for e ಇವರನ್ನು ಸಂಪರ್ಕಿಸಬಹುದು.

5.ಈ ಆದೇಶ ದಿನಾಂಕ 1-10 ರಿಂದ ಜಾರಿಗೆ ಬರುತ್ತದೆ.ಈ ಆದೇಶವನ್ನು ಉಲ್ಲಂಘಿಸುವ ಅಧಿಕಾರಿಯನ್ನು ಹೊಣೆಗಾರಿಕೆ ಮಾಡಲಾಗುತ್ತದೆ.

Join Whatsapp