ತಾಲಿಬಾನ್ ನಿಯಂತ್ರಿತ ಹೇರತ್ ನಲ್ಲಿ ಶಾಲಾಗಳು ಆರಂಭ: ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರು

Prasthutha|

ಹೇರತ್ (ಅಫ್ಘಾನಿಸ್ತಾನ): ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ತಾನದ ಹೇರತ್ ನಲ್ಲಿ ಶಾಲೆಗಳು ಆರಂಭಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಫ್ಘಾನ್ ಹುಡುಗಿಯರು ತರಗತಿಗಳಿಗೆ ಹಾಜರಾಗಿದ್ದಾರೆ.

- Advertisement -


ಬಿಳಿ ಹಿಜಾಬ್ ಮತ್ತು ಕಪ್ಪು ಬಣ್ಣದ ಸಮವಸ್ತ್ರ ಧರಿಸಿ ವಿದ್ಯಾರ್ಥಿನಿಯರು ತರಗತಿಗೆ ಬಂದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಳೆದ ಎರಡು ವಾರಗಳಲ್ಲಿ ದೇಶದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ ಮಧ್ಯೆ ಬುಧವಾರ ಶಾಲೆಯ ಬಾಗಿಲು ತೆರೆದಾಗ, ವಿದ್ಯಾರ್ಥಿಗಳು ಕಾರಿಡಾರ್‌ ಗಳಲ್ಲಿ ಓಡಾಡುತ್ತಿದ್ದರು ಮತ್ತು ಅಂಗಳದಲ್ಲಿ ಹರಟೆ ಹೊಡೆಯುತ್ತಿದ್ದ ದೃಶ್ಯ ಕಂಡುಬಂತು.
ತಾಲಿಬಾನ್ ಆಡಳಿತಕ್ಕೆ ಬರುತ್ತಿದ್ದಂತೆ ಉಂಟಾಗಿದ್ದ ಎಲ್ಲಾ ಆತಂಕಗಳು ದೂರವಾಗಿದ್ದು, ಶಾಲಾ-ಕಾಲೇಜುಗಳು ತೆರೆಯುತ್ತಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಇತರ ದೇಶಗಳಂತೆ ನಾವು ಕೂಡ ಪ್ರಗತಿ ಹೊಂದಬೇಕು ಎಂದು ವಿದ್ಯಾರ್ಥಿನಿ ರುಖಿಯಾ ಈ ವೇಳೆ ಎದುರುಗೊಂಡ ಸುದ್ದಿಗಾರರಿಗೆ ತಿಳಿಸಿದ್ದಾಳೆ.


” ತಾಲಿಬಾನ್ ಭದ್ರತೆಯನ್ನು ನೀಡಲಿದೆ ಎಂದು ನಾವು ಭಾವಿಸುತ್ತೇವೆ. ನಮಗೆ ಯುದ್ಧ ಬೇಡ, ನಮ್ಮ ದೇಶದಲ್ಲಿ ಶಾಂತಿ ಬೇಕು.” ಎಂದು ಆಕೆ ಹೇಳಿದ್ದಾಳೆ.
ಇರಾನಿನ ಗಡಿಗೆ ಹೊಂದಿಕೊಂಡಿರುವ ಮತ್ತು ಅತ್ಯಂತ ಪುರಾತನ ಸಿಲ್ಕ್ ರೋಡ್ ನಗರವಾದ ಹೆರಾತ್ ಹೆಚ್ಚು ಸಂಪ್ರದಾಯವಾದಿಗಳಿರುವ ಪ್ರದೇಶವಾಗಿದೆ.
ಮಹಿಳೆಯರು ಮತ್ತು ಹುಡುಗಿಯರು ಬೀದಿಗಳಲ್ಲಿ ಮುಕ್ತವಾಗಿ ಓಡಾಡುತ್ತಿದ್ದಾರೆ. ಕಲೆ ಮತ್ತು ಕವನಗಳಿಗೆ ಹೆಚ್ಚು ಹೆಸರುವಾಸಿಯಾದ ಈ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ –ಕಾಲೇಜುಗಳು ತೆರೆದಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಕೂಡ ಹಾಜರಾಗಿದ್ದಾರೆ.

- Advertisement -



Join Whatsapp