ಚಿತ್ತೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿಗೆ ಚಿನ್ನದ ಮೂರ್ತಿಯ ಮಂದಿರ

Prasthutha|

ಆಂಧ್ರ ಪ್ರದೇಶ: ವೈಎಸ್ ಆರ್ ಕಾಂಗ್ರೆಸ್ಸಿನ ಶಾಸಕರೊಬ್ಬರು ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿ ವೈ. ಎಸ್. ಜಗನ್ಮೋಹನ ರೆಡ್ಡಿಯವರ ಒಂದು ಮ್ಯೂಸಿಯಂ ಮತ್ತು ಮಂದಿರ ಕಟ್ಟಿಸಿ, ಮುಖ್ಯಮಂತ್ರಿಗೆ ಅರ್ಪಿಸಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಯವರ ಒಂದು ಚಿನ್ನದ ಮೂರ್ತಿ ಇರುವುದಾಗಿ ಹೇಳಲಾಗಿದ್ದು ಫೋಟೋ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

- Advertisement -


ಈ ದೇವಸ್ಥಾನದ ಹೆಸರು ನವರತ್ನಾಲು ಆಲಯಂ. ಶ್ರೀಕಾಳಹಸ್ತಿಯ ಶಾಸಕ ಬಿಯ್ಯಾಪು ಮಧುಸೂಧನ ರೆಡ್ಡಿ ಈ ದೇವಸ್ಥಾನ ಕಟ್ಟಿಸಿದವರು. ತಿರುಪತಿ ಬಳಿಯ ಚಿತ್ತೂರು ಜಿಲ್ಲೆಯ ಈ ಆಲಯ ಇತ್ತೀಚೆಗೆ ಹಲವಾರು ಮಂತ್ರಿಗಳು ಮತ್ತು ನಾಯಕರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿದೆ. ಉಪ ಮುಖ್ಯಮಂತ್ರಿ ಕೆ. ನಾರಾಯಣಸ್ವಾಮಿ, ಪಂಚಾಯತ್ ರಾಜ್ ಸಚಿವ ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ, ಸಂಸದ ಪಿ. ವಿ. ಮಿದುನ್ ರೆಡ್ಡಿ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.


“ಬಡವರು ಬದುಕಿನಲ್ಲಿ ಯೋಜನೆಗಳ ಮೂಲಕ ಆನಂದ ತುಂಬುತ್ತಿರುವ ನಮ್ಮ ಜಗನ್ನಣ್ಣ ಅವರು ದೇವರು ಕಣಣ್ಣ ದೇವರು” ಎನ್ನುತ್ತಾರೆ ಆಲಯ ಕಟ್ಟಿಸಿದ ಬಿಯ್ಯಾಪು ಮಧುಸೂಧನ ರೆಡ್ಡಿ. ನವರತ್ನಾಲು, ರೈತು ಭರೋಸಾ, ಜಲಯಜ್ಞಂ, ಆರೋಗ್ಯಸಿರಿ, ಮದ್ಯಪಾನ ನಿಷೇಧ, ಅಮ್ಮಾ ವೋಡಿ, ವೈಎಸ್ ಆರ್ ಆಸರಾ, ಬಡವರಿಗೆ ಮನೆ, ಪಿಂಚಣಿ ಹೆಚ್ಚಳ ಈ ಒಂಬತ್ತು ಸರಕಾರೀ ಯೋಜನೆಗಳಿಗೆ ಒತ್ತು ನೀಡಿ ಈ ದೇವಾಲಯದಲ್ಲಿ ವಿಭಾಗಗಳು ಇವೆ.



Join Whatsapp