ಸಿಬ್ಬಂದಿ ನಿರ್ಲಕ್ಷ್ಯ: ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

Prasthutha|

ಸಿದ್ದಾಪುರ: ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಇಲ್ಲದೆ, ಸೌಲಭ್ಯವೂ ಸಿಗದೆ ಗರ್ಭಿಣಿ ಮಹಿಳೆಯೊಬ್ಬರು ಕೇಂದ್ರದ ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

- Advertisement -

ಗುಹ್ಯ ಗ್ರಾಮದ ಕಾರ್ಮಿಕ ಮಹಿಳೆ ಸಂಗೀತಾ ಎಂಬವರಿಗೆ ಬೆಳಗ್ಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವರನ್ನು ಆರೋಗ್ಯ ಕೇಂದ್ರಕ್ಕೆ ಬೆಳಿಗ್ಗೆ 6 ಗಂಟೆ ವೇಳೆಗೆ ಕರೆತಂದಾಗ ಬಾಗಿಲು ಮುಚ್ಚಿತ್ತು. ಅನೇಕ ಬಾರಿ ಬಾಗಿಲು ಬಡಿದು ಕರೆದರೂ ಯಾರೂ ಬಾಗಿಲು ತೆರೆಯಲಿಲ್ಲ.

ಸುಮಾರು ಅರ್ಧ ಗಂಟೆ ನಂತರ ಕೇಂದ್ರದ ಹಿಂಬಾಗಿಲಿನಿಂದ ಕುಟುಂಬದ ಸದಸ್ಯರು ಒಳಗೆ ಹೋದಾಗ ಕಾವಲುಗಾರನನ್ನು ನೋಡಿದರು. ಅವರಿಗೆ ಮಾಹಿತಿ ನೀಡಿ, ಸಿಬ್ಬಂದಿ ಕರೆಯಲು ಕೋರಿದರೂ ಅವರೂ ಸ್ಪಂದಿಸಲಿಲ್ಲ. ಅಷ್ಟರಲ್ಲಿ ಕೇಂದ್ರದ ಮುಂಬಾಗಿಲ ಸಮೀಪವೇ ಮಹಿಳೆಯ ಹೆರಿಗೆಯಾಯಿತು. ‘ಸಾಮಾನ್ಯವಾಗಿ ರಾತ್ರಿ ವೇಳೆ ಮುಂಬಾಗಿಲು ಮುಚ್ಚಿರುತ್ತದೆ. ಬದಿಯ ಬಾಗಿಲು ತೆರೆದಿರುತ್ತದೆ. ಈ ಮಾಹಿತಿ ಇಲ್ಲದೇ ಗರ್ಭಿಣಿ ಕಾರಿನಲ್ಲೇ ಕುಳಿತಿದ್ದರು. ಹೆರಿಗೆ ಬಳಿಕ ಆಸ್ಪತ್ರೆ ಸಿಬ್ಬಂದಿಯೇ ತಾಯಿ-ಮಗುವನ್ನು ಆರೈಕೆ ಮಾಡಿದ್ದಾರೆ ಎನ್ನಲಾಗಿದೆ.

Join Whatsapp