ಕಟ್ಟಡದಿಂದ ಕೆಳಗೆ ಹಾರಿ SSLC ವಿದ್ಯಾರ್ಥಿ ಸಾವು

Prasthutha|

- Advertisement -

ಬೆಂಗಳೂರು: ಹೆಬ್ಬಗೋಡಿ ಬಳಿಯ ಕಮ್ಮಸಂದ್ರದ ಡ್ಯಾಡೀಸ್ ಬಡಾವಣೆಯ ಗಾರ್ಡನ್ ಅಪಾರ್ಟ್​ಮೆಂಟ್​ನ 5ನೇ ಮಹಡಿಯಿಂದ ಕೆಳಗೆ ಹಾರಿ ಎಸ್‌ ಎಸ್ ಎಲ್ ಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಬೇಗೂರು ಟ್ರಮೀಸ್ ಶಾಲೆಯ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಆದಿತ್ಯ ಪಾಟೀಲ್​ ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ.

- Advertisement -

ವೈದ್ಯ ಶರಣು ಪಾಟೀಲ್ ಮತ್ತು ಮಮತಾರ ಮುದ್ದಿನ ಏಕೈಕ ಮಗನಾಗಿದ್ದ. ಶರಣು ಪಾಟೀಲ್​ ಮತ್ತು ಮಮತಾ ನಾರಾಯಣ ಹೆಲ್ತ್ ಸಿಟಿಯ ಸ್ಪರ್ಶ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞನಾಗಿದ್ದರು.

ಕಳೆದ ತಿಂಗಳಿನಿಂದ ಮೊಬೈಲನ್ನೇ ನೋಡುತ್ತಾ ಇರುತ್ತಿದ್ದ. ಮೊಬೈಲ್​ ಇಲ್ಲದೆ ಮನೆ ಬಿಟ್ಟು ಹೆಚ್ಚು ಆಚೆಗೆ ಬರುತ್ತಿರಲಿಲ್ಲ. ಫುಟ್ಬಾಲ್ ಆಟಗಾರನಾಗಿದ್ದ ಆತ ತಿಂಗಳಿಂದ ಯಾರೊಂದಿಗೂ ಬೆರೆಯುತ್ತಿರಲಿಲ್ಲವೆಂದು ಗೆಳೆಯರು ತಿಳಿಸಿದ್ದಾರೆ.

ಮನೆ ಮುಂದಿನ ಶರವಣ ಬಿಲ್ಡಿಂಗ್​ನ 5ನೇ ಅಂತಸ್ತಿನಿಂದ ಕೆಳಗೆ ಹಾರಿದ ಪರಿಣಾಮ ತಲೆ ಒಡೆದು ಮಿದುಳು ಹೊರಗೆ ಚಿಮ್ಮಿದ್ದು, ಸುತ್ತಲ ಅಪಾರ್ಟ್​ಮೆಂಟ್​ ವಾಸಿಗಳಿಗೆ ಗಾಬರಿ ಹುಟ್ಟಿಸಿದೆ. ಕಳೆದ ಮೂರು ದಿನಗಳಿಂದ 10ನೇ ತರಗತಿಯ ಪರೀಕ್ಷೆ ನಡೆಯುತ್ತಿದೆ. ನಿನ್ನೆಯಷ್ಟೇ ಪರೀಕ್ಷೆಗೆ ಹಾಜರಾಗಿದ್ದ. ಮಂಗಳವಾರ ಅರ್ಧ ಗಂಟೆಯಿಂದ ನಾಪತ್ತೆಯಾಗಿದ್ದ.

ಹುಡುಗನಿಗಾಗಿ ಹುಡುಕಾಟ ನಡೆಸುವಷ್ಟರಲ್ಲಿ ಮನೆ ಮುಂದಿನ ಎತ್ತರದ ಅಪಾರ್ಟ್​ಮೆಂಟ್​ ಕಟ್ಟಡದ ಮೇಲೆ ಹತ್ತಿ ಕೆಳಗೆ ಹಾರಿದ್ದಾನೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.



Join Whatsapp