SSLC ಫಲಿತಾಂಶ: ಇಂಡಿಯನ್ ಪಬ್ಲಿಕ್ ಸ್ಕೂಲಿನ ಹಲೀಮಾ ಸಾದಿಯಾಗೆ 598 ಅಂಕ

Prasthutha|

ಚನ್ನಪಟ್ಟಣ: 2022-2023 ನೇ ಸಾಲಿನ SSLC ಪರೀಕ್ಷೆಯಲ್ಲಿ ಸೈಯದ್ ವಾಡಿ ಚನ್ನಪಟ್ಟಣ ತಾಲೂಕಿನ ಇಂಡಿಯನ್ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿನಿ ಹಲೀಮಾ ಸಾದಿಯಾ 625ಕ್ಕೆ 598(95.68%) ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

- Advertisement -

ಹಲೀಮಾ ಸಾದಿಯಾ ಅವರು ಸೈಯದ್ ವಾಡಿ ಚನ್ನಪಟ್ಟಣ ತಾಲೂಕಿನ ಕುಂಬರ್ಗೇರಿ ಕ್ರಾಸ್ ನ ಸೈಯದ್ ಆಸಿಫ್ ಮತ್ತು ಅಕ್ಲೀಮ್ ತಾಜ್ ದಂಪತಿಯ ಪುತ್ರಿಯಾಗಿದ್ದಾರೆ.

ಅವರ ಸಾಧನೆಗೆ ಪೋಷಕರು ಹರ್ಷ ವ್ಯಕ್ತಪಡಿಸಿದ್ದು, ಶಾಲೆಯ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ. ಹಲೀಮಾ ಸಾದಿಯಾ ಕುಟುಂಬಿಕರೊಂದಿಗೆ ಸಂಭ್ರಮ ಹಂಚಿಕೊಂಡಿದ್ದಾರೆ.

Join Whatsapp