SSLC ಫಲಿತಾಂಶ ಪ್ರಕಟ : ಕೃಷ್ಣಾಪುರದ ಅಲ್ ಬದ್ರಿಯಾ ಶಾಲೆಗೆ ಶೇಕಡಾ 98.98% ಫಲಿತಾಂಶ

Prasthutha|

SSLC ಫಲಿತಾಂಶ ಪ್ರಕಟ : ಕೃಷ್ಣಾಪುರದ ಅಲ್ ಬದ್ರಿಯಾ ಶಾಲೆಗೆ ಶೇಕಡಾ 98.98% ಫಲಿತಾಂಶ

- Advertisement -

ಮಂಗಳೂರು: 2022-2023 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಕೃಷ್ಣಾಪುರದ ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಶೇಕಡಾ 98.98% ಫಲಿತಾಂಶವನ್ನು ಪಡೆದು ಉತ್ತೀರ್ಣರಾಗಿದ್ದಾರೆ.

ಒಟ್ಟು 98 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 6 ವಿದ್ಯಾರ್ಥಿಗಳು A+ ಶ್ರೇಣಿ, 18 ವಿದ್ಯಾರ್ಥಿಗಳು A ಶ್ರೇಣಿ, 40 ವಿದ್ಯಾರ್ಥಿಗಳು B+ ಶ್ರೇಣಿ, 25 ವಿದ್ಯಾರ್ಥಿಗಳು B ಶ್ರೇಣಿ ಹಾಗೂ 8 ವಿದ್ಯಾರ್ಥಿಗಳು C+ ಶ್ರೇಣಿಯನ್ನು ಪಡೆದಿರುತ್ತಾರೆ.

- Advertisement -

ಮುಹಮ್ಮದ್ ಸುಹೈಲ್ 615 (98.4%) ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

ಉತ್ತಮ ಸಾಧನೆಗೈದ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.

Join Whatsapp