ಅಭ್ಯರ್ಥಿಗಳಿಗೂ ಕಾವಲು ಕಾಯಲು ಅವಕಾಶ| ಮತಯಂತ್ರ ಸುರಕ್ಷತೆಗೆ ಹೊಸ ವ್ಯವಸ್ಥೆ

Prasthutha|

- Advertisement -

ಮಂಗಳೂರು: ಮತದಾನ ನಡೆದ ಬಳಿಕ ಮತ ಯಂತ್ರಗಳನ್ನು ತಂದು ಭದ್ರತಾ ಕೊಠಡಿಗಳಲ್ಲಿ ಇರಿಸುವಾಗ, ಈ ಬಾರಿ ಪಕ್ಷಗಳ ಅಭ್ಯರ್ಥಿ ಅಥವಾ ಅವರ ಪ್ರತಿನಿಧಿ ಕೇಂದ್ರೀಯ ಪೊಲೀಸ್‌ ವಾಹನದ ಹಿಂದೆ ಪ್ರತ್ಯೇಕ ವಾಹನದಲ್ಲಿ ಬರಬಹುದು.

- Advertisement -

ಅಷ್ಟೇ ಅಲ್ಲ ಸ್ಟ್ರಾಂಗ್‌ ರೂಂನಲ್ಲಿ ಇರಿಸಿದ ಬಳಿಕ ಅಭ್ಯರ್ಥಿಗಳು/ ಅವರ ಏಜೆಂಟರು/ ಪ್ರತಿನಿಧಿಗಳು (ಯರಾದರೂ ಒಬ್ಬರು ಮಾತ್ರ) ಅದೇ ಕೇಂದ್ರದಲ್ಲಿ ಅವರಿಗೆ ನಿಗದಿ ಪಡಿಸಿದ ಕೊಠಡಿಯಲ್ಲಿ ಇರಬಹುದು. ಭದ್ರತಾ ಕೊಠಡಿಯ ಸಿಸಿಟಿವಿಯನ್ನು ಅವರಿಗೆ ನೇರವಾಗಿ ವೀಕ್ಷಿಸಲು ಈ ಬಾರಿ ಅವಕಾಶ ಇದೆ.

ಡಿಮಸ್ಟರಿಂಗ್‌ ಕೇಂದ್ರಗಳಿಂದ ಭದ್ರತಾ ಕೊಠಡಿಗೆ ಮತಯಂತ್ರ ತರುವಾಗ ಹಾಗೂ ಭದ್ರತಾ ಕೊಠಡಿಗಳಲ್ಲಿ ಇರಿಸಿರುವಾಗ ಕೇವಲ ಕೇಂದ್ರೀಯ ಅರೆ ಮಿಲಿಟರಿ ಪೊಲೀಸ್‌ ಪಡೆ (ಸಿಪಿಎಂಎಫ್)‌ ಭದ್ರತೆ ಕೊಡುತ್ತಿದ್ದರು. ಈ ಬಾರಿ ಚುನಾವಣಾ ಆಯೋಗ ಭದ್ರತೆ ನೀಡಲು ಹಾಗೂ ವೀಕ್ಷಣೆಗೆ ಅಭ್ಯರ್ಥಿಗಳಿಗೂ ಅವಕಾಶ ಮಾಡಿಕೊಟ್ಟಿದೆ.

ಮಂಗಳೂರಿನ ಎನ್‌ಐಟಿಕೆಯಲ್ಲಿರುವ ಭದ್ರತಾ ಕೊಠಡಿಯ ಕ್ಯಾಂಪಸ್‌ನಲ್ಲಿ ಅಭ್ಯರ್ಥಿ/ಪ್ರತಿನಿಧಿಗಳಿಗೆ ಮೇ 13ರ ವರೆಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.