ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಪರಿಹಾರಕ್ಕಾಗಿ ಸರ್ವಪಕ್ಷಗಳ ಸಭೆ ಕರೆದ ಗೋತಬಯ ರಾಜಪಕ್ಷೆ

Prasthutha|

ಕೊಲಂಬೊ: ಪ್ರಸಕ್ತ ಶ್ರೀಲಂಕಾದಲ್ಲಿ ತಲೆದೋರಿರುವ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಸಚಿವ ಸ್ಥಾನವನ್ನು ಅಲಂಕರಿಸುವಂತೆ ಅಹ್ವಾನಿಸಲು ಸಂಸತ್ತಿನಲ್ಲಿ ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಾರೆ.

- Advertisement -

ಶ್ರೀಲಂಕಾ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿದ ರಾಜಪಕ್ಷೆ, “ಇದನ್ನು ರಾಷ್ಟ್ರೀಯ ಅಗತ್ಯವೆಂದು ಪರಿಗಣಿಸಬೇಕಾಗಿದ್ದು, ಎಲ್ಲಾ ನಾಗರಿಕರು ಮತ್ತು ಭವಿಷ್ಯದ ಪೀಳಿಗೆಗಾಗಿ ಒಟ್ಟಾಗಿ ಕೆಲಸ ಮಾಡುವ ಸಮಯ ಬಂದಿದೆ. ಈ ರಾಷ್ಟ್ರೀಯ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ಮಂತ್ರಿ ಖಾತೆಗಳನ್ನು ಸ್ವೀಕರಿಸಲು ಸಂಸತ್ತಿನಲ್ಲಿ ಪ್ರತಿನಿಧಿಸುವ ಎಲ್ಲಾ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸಲು ರಾಷ್ಟ್ರಪತಿಗಳು ಆಹ್ವಾನಿಸುತ್ತಾರೆ ”ಎಂದು ಸೋಮವಾರ ಬೆಳಿಗ್ಗೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶ್ರೀಲಂಕಾದ ಬಿಕ್ಕಟ್ಟಿಗೆ ಹಣದುಬ್ಬರ, ಅರ್ಥಿಕ ಅಂಶಗಳು ಮತ್ತು ಜಾಗತಿಕ ಬೆಳವಣಿಗೆಯೇ ಪ್ರಮುಖ ಕಾರಣ ಎಂದು ಉಲ್ಲೇಖಿಸಿದ ಅಧ್ಯಕ್ಷ ರಾಜಪಕ್ಷೆ, ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದ್ದಾರೆ.

- Advertisement -

ಪ್ರಸಕ್ತ ಶ್ರೀಲಂಕಾ ಕ್ಯಾಬಿನೆಟ್ ಗೆ ಸಾಮೂಹಿಕ ರಾಜೀನಾಮೆ ನೀಡಿದ್ದ ಒಂದು ದಿನದ ಬಳಿಕ ಅಧ್ಯಕ್ಷರಿಂದ ಈ ಹೇಳಿಕೆ ಹೊರಬಿದ್ದಿದೆ.

ಸದ್ಯ ಅಧ್ಯಕ್ಷ ಗೋತಬಯ ರಾಜಪಕ್ಷೆ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಷೆ ಸಂಸತ್ ಕಚೇರಿಯಲ್ಲೇ ಉಳಿದಿದ್ದಾರೆ ಎಂದು ಹೇಳಲಾಗಿದೆ.

Join Whatsapp