ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ವಿವಾದ: ರಾಜ್ಯ ಸರ್ಕಾರದಿಂದ ಆಡಳಿತ ಮಂಡಳಿ ರಚನೆ

Prasthutha|

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ವಿವಾದ ಸಂಬಂಧ ರಾಜ್ಯ ಸರ್ಕಾರ, ಆಡಳಿತ ಮಂಡಳಿ ರಚನೆ ಮಾಡಿ‌ ಆದೇಶ ಹೊರಡಿಸಿದೆ.

- Advertisement -

ರಾಜ್ಯ ಸರ್ಕಾರವು ಸುಮಾರು 3 ದಶಕಗಳಿಂದ ವಿವಾದಿತ ಸ್ಥಳವಾಗಿರುವ ಪೀಠಕ್ಕೆ ಓರ್ವ ಮುಸ್ಲಿಂ ಸೇರಿದಂತೆ 8 ಜನ ಸದಸ್ಯರಿರುವ ವ್ಯವಸ್ಥಾಪನಾ ಸಮಿತಿ ರಚಿಸಿ ಆದೇಶ ಹೊರಡಿಸಿದೆ. ವ್ಯವಸ್ಥಾಪನಾ ಸಮಿತಿಯಲ್ಲಿ ಕೆ.ಸತೀಶ್, ಸಿ.ಜಿ. ಲೀಲಾ, ಶೀಲಾ, ಎನ್.ಎಸ್.ಸುಮಂತ್, ಕೆ.ಎಸ್.ಗುರುವೇಶ್, ಜಿ. ಎಚ್.ಹೇಮಂತ್‌ಕುಮಾರ್, ಎಸ್.ಎಂ.ಭಾಷಾ, ಸಿ.ಎಸ್.ಚೇತನ್ ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸದಸ್ಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಆದೇಶದಲ್ಲಿ ತಿಳಿಸಿದ್ದಾರೆ.

ವ್ಯವಸ್ಥಾಪನಾ ಸಮಿತಿ ಸದಸ್ಯರಾಗಲು 42 ಅರ್ಜಿಗಳು ಬಂದಿದ್ದು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ ಆಧಾರದ ಮೇಲೆ ಈ ಮೇಲ್ಕಂಡವರನ್ನು ಆಯ್ಕೆ ಮಾಡಲಾಗಿದೆ.

- Advertisement -

ಸದಸ್ಯರು ರಾಜಕೀಯ ಪಕ್ಷದ ಪದಾಧಿಕಾರಿಗಳು ಎಂದು ಕಂಡು ಬಂದಲ್ಲಿ ಅಂತವರ ಸದಸ್ಯತ್ವ ರದ್ದಾಗಲಿದೆ. ಸದಸ್ಯರು ತಮ್ಮ ಪ್ರಥಮ ಸಭೆಯಲ್ಲಿ ಸಮಿತಿಯ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Join Whatsapp