ವಿಜಯೇಂದ್ರ ಫ್ರೀ ಇದ್ದರೆ ಬಂದು ನನಗೆ ಕಟ್ಟಿಂಗ್ ಮಾಡಲಿ: ಮಧು ಬಂಗಾರಪ್ಪ

Prasthutha|

ಚಿತ್ರದುರ್ಗ: ನನಗೆ ಕಟ್ಟಿಂಗ್ ಮಾಡುವವರು ಫ್ರೀ ಇಲ್ಲ. ವಿಜಯೇಂದ್ರ ಫ್ರೀ ಇದ್ದರೆ ಬಂದು ಕಟ್ಟಿಂಗ್ ಮಾಡಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಟಾಂಗ್ ಕೊಟ್ಟಿದ್ದಾರೆ.

- Advertisement -

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಇತ್ತೀಚೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕೇಶವಿನ್ಯಾಸದ ಬಗ್ಗೆ ಟೀಕಿಸಿದ್ದರು. ಶಾಲೆಗೆ ತೆರಳುವ ಮಕ್ಕಳ ಪೋಷಕರು ನಮ್ಮ ಮಕ್ಕಳು ತಲೆಬಾಚಿಕೊಂಡು ಶಿಸ್ತಿನಿಂದ ತೆರಳಬೇಕು ಎಂದು ಭಾವಿಸುತ್ತಾರೆ. ಆದರೆ ಶಿಕ್ಷಣ ಸಚಿವರು ವಿಧಾನಸೌಧಕ್ಕೆ ಬರುವಾಗ ಆದರು ತಲೆ ಬಾಚಿಕೊಂಡು ಬರುವಂತೆ ಹೇಳಿದ್ದರು.


ವಿಜಯೇಂದ್ರ ಭ್ರಮೆಯಲ್ಲಿದ್ದಾರೆ. ವಿಜಯೇಂದ್ರ ಅವರ ಅಪ್ಪ ಸಿಎಂ ಆಗಿದ್ದರೆಂಬ ಭ್ರಮೆಯಲ್ಲಿದ್ದಾರೆ. ಆ ಭ್ರಮೆಯಿಂದ ಹೊರ ಬರಬೇಕು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಏನು ಮಾಡಬೇಕೆಂದು ಯೋಚಿಸಲಿ ಎಂದು ತಿರುಗೇಟು ನೀಡಿದರು.

- Advertisement -


ಸಿನಿಮಾ ಲೋಕದಲ್ಲಿದ್ದೇನೆ ಎಂಬ ಭ್ರಮೆಯಲ್ಲಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚಿತ್ರರಂಗದ ಬಗ್ಗೆ ವಿಜಯೇಂದ್ರ ಮಾತನಾಡುವ ಅಗತ್ಯ ಇಲ್ಲ. ಜೂನ್ 4ಕ್ಕೆ ಅವರ ಹಣೆಬರಹ ಅವರು ನೋಡಿಕೊಳ್ಳಲಿ ಎಂದು ಕಿಡಿಕಾರಿದರು.

Join Whatsapp