ಕಾರು ಚಾಲನೆ ವೇಳೆ ಮೂಗಿಗೆ ಬೆರಳು ಹಾಕಿದ್ದಕ್ಕೆ ಭಾರಿ ದಂಡ !

Prasthutha|

ಸೌದಿ ಅರೇಬಿಯಾ: ಯಾವುದೇ ಕೆಲಸ ಮಾಡುತ್ತಿದ್ದರೂ ಸಹ ಮೂಗಿನೊಳಗೆ ಬೆರಳು ತೂರಿಸುವುದು ನಮ್ಮಲ್ಲಿ ಕೆಲವರಿಗೆ ಅಭ್ಯಾಸ. ಆದರೆ ಗಲ್ಫ್ ರಾಷ್ಟ್ರಗಳಲ್ಲಿ ವಾಹನ ಚಾಲನೆ ಮಾಡುವಾಗ ‘ಈ ಕೆಲಸ’ ಮಾಡಿದರೆ ಭಾರಿ ದಂಡ ತೆರಬೇಕಾಗಬಹುದು ಎಚ್ಚರ !

- Advertisement -

ಮೂಗಿನೊಳಗೆ ಬೆರಳು ತೂರಿಸುತ್ತಾ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಸೌದಿ ಅರೇಬಿಯಾದ ಟ್ರಾಫಿಕ್ ಪೊಲೀಸರು 300 ರಿಯಾಲ್ ಅಂದರೆ 6 ಸಾವಿರ ರುಪಾಯಿಗೂ ಅಧಿಕ ದಂಡ ವಿಧಿಸಿದ್ದಾರೆ. ಕೇಳಲು ವಿಚಿತ್ರವೆನಿಸಿದರೂ ಇದು ಸತ್ಯ. ಟ್ರಾಫಿಕ್ ನಿಯಮಗಳು ಅತ್ಯಂತ ಕಟ್ಟುನಿಟ್ಟಾಗಿರುವ ಗಲ್ಫ್ ರಾಷ್ಟ್ರಗಳಲ್ಲಿ ಅದರಲ್ಲೂ UAE, ಸೌದಿ ಅರೇಬಿಯಾ ದೇಶಗಳಲ್ಲಿ ಚಾಲಕರ ಸಣ್ಣ ನಿರ್ಲ್ಯಕ್ಷ್ಯಕ್ಕೂ ಭಾರಿ ದಂಡ ತೆರಬೇಕಾಗಿದೆ.

 ಈ ದೇಶಗಳ ಟ್ರಾಫಿಕ್ ನಿಯಮದ ಪ್ರಕಾರ ಚಾಲನೆ ವೇಳೆ ಚಾಲಕನ ಎರಡೂ ಕೈಗಳು ಸ್ಟೇರಿಂಗ್ ಮೇಲೆಯೇ ಇರಬೇಕು. ಒಂದು ಕೈಯಲ್ಲಿ ಚಾಲನೆ ಮಾಡುತ್ತಾ ಮತ್ತೊಂದು ಕೈಯಲ್ಲಿ ಇನ್ಯಾವುದಾದರೂ ಕೆಲಸದಲ್ಲಿ ಏರ್ಪಟ್ಟರೆ ದಂಡ ಕಟ್ಟಿಟ್ಟ ಬುತ್ತಿ. ಸೌದಿ ಅರೇಬಿಯಾದಲ್ಲಿ ಒಂದು ಕೈಯಲ್ಲಿ ಚಾಲನೆ ಮಾಡುತ್ತಾ ಮತ್ತೊಂದು ಕೈಯಲ್ಲಿ ಮೊಬೈಲ್ ಬಳಸುತ್ತಿದ್ದರೆ 500 ರಿಯಾಲ್ ಅಂದರೆ 10 ಸಾವಿರ ರುಪಾಯಿಗೂ ಅಧಿಕ ದಂಡ ಕಟ್ಟಬೇಕಾಗುತ್ತದೆ. ಇನ್ನು ಆಹಾರ ತಿನ್ನುತ್ತಿದ್ದರೆ ದಂಡದ ಮೊತ್ತದಲ್ಲಿ ರಿಯಾಯಿತಿ ಇದ್ದು 150 ರಿಯಾಲ್ ಅಂದರೆ ಮೂರು ಸಾವಿರಕ್ಕೂ ಅಧಿಕ ದಂಡ ಕಟ್ಟಬೇಕಾಗುತ್ತದೆ.



Join Whatsapp