ಕಲಾಪವನ್ನು ಸಹಪಾಠಿಗಳ ಜತೆಗೆ ವೀಕ್ಷಿಸಿದ ಸ್ಪೀಕರ್ ಯು.ಟಿ ಖಾದರ್ ಪುತ್ರಿ

Prasthutha|

ಬೆಂಗಳೂರು: ಸ್ಪೀಕರ್ ಯು.ಟಿ ಖಾದರ್ ಅವರ ಪುತ್ರಿ ಹವ್ವಾ ನಸೀಮಾ ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನ ದ್ವಿತೀಯ ವರ್ಷದ ಬಿ.ಎ ರಸಾಯನ ಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಭಾಗದ ಸಹಪಾಠಿಗಳ ಜೊತೆಗೆ ವಿಧಾನಸಭಾ ಕಲಾಪವನ್ನು ವೀಕ್ಷಿಸಿದ್ದಾರೆ.

- Advertisement -

ವಿಧಾನ ಸೌಧದಲ್ಲಿ ತಂದೆ ನೇತೃತ್ವದಲ್ಲಿ ನಡೆಯುವ ವಿಧಾನಸಭಾ ಕಲಾಪವನ್ನು ವೀಕ್ಷಿಸುವುದರ ಜೊತೆಗೆ ವಿಧಾನ ಸೌಧ ಹಾಗೂ ಕಲಾಪಗಳ ಮಹತ್ವದ ಮಾಹಿತಿಯನ್ನು ಅಧಿಕಾರಿಗಳೊಂದಿಗೆ ಪಡೆದುಕೊಂಡರು.

ಒಟ್ಟು 38 ವಿದ್ಯಾರ್ಥಿಗಳು ಹಾಗೂ ಇಬ್ಬರು ಉಪನ್ಯಾಸಕರು ಭಾಗಿಯಾಗಿದ್ದರು.



Join Whatsapp