ಭೂಮಿಕ ಕೊಲೆ ಆರೋಪಿಯನ್ನು ಬಂಧಿಸುವಂತೆ ಮಹಾಶಕ್ತಿ ಮಹಿಳಾ ಸಂಘ ಆಗ್ರಹ ..!

Prasthutha|

►ಭೂಮಿಕಾ ಕೊಲೆ ಆರೋಪಿ ಸೇರಿ ಕುಟುಂಬದವರನ್ನು ಬಂಧಿಸುವಂತೆ ಎಸ್ಪಿಗೆ ಮನವಿ

- Advertisement -

ಮಸ್ಕಿ : ಪಟ್ಟಣದ ಭೂಮಿಕಾ ತಂದೆ ಮರಿಸ್ವಾಮಿ ಇವರನ್ನು ಕೊಲೆ ಮಾಡಿದ ರಮೇಶ ತಂದೆ ಹುಲುಗಪ್ಪ ಕಬ್ಬೇರು ಸಾ// ಕಡ್ಡೋಣಿ ಎಂಬ ಈತನು ಭೂಮಿಕಾ ಇವರನ್ನು ಅಪಹರಿಸಿ ಆಕೆಯನ್ನು ಅತ್ಯಾಚಾರ ಮಾಡಿ ಲೈಂಗಿಕ ಹಿಂಸೆ ನೀಡಿ ಕೊಲೆ ಮಾಡಿದ್ದಾನೆ.

 ಕೊಲೆ ಮಾಡಿದ ರಮೇಶ ನನ್ನು ಬಂಧಿಸಿ ನೊಂದ ಭೂಮಿಕಾ ಕುಟುಂಬಕ್ಕೆ ಪೋಲೀಸ್ ಬಂದೋಬಸ್ತ್ ಒದಗಿಸಬೇಕು ಮತ್ತು ರಮೇಶ ಅವರ ಕುಟುಂಬದವರನ್ನು ಬಂಧಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಯಚೂರು ಇವರಲ್ಲಿ ಮಹಾ ಶಕ್ತಿ ಮಹಿಳಾ ಸಬಲೀಕರಣ ಸಂಘದಿಂದ ಮನವಿ ಪತ್ರ ನೀಡುವ ಮೂಲಕ ಒತ್ತಾಯ ಮಾಡಲಾಯಿತು.

- Advertisement -

 ಕೊಲೆ ಆರೋಪಿ ರಮೇಶನು ದೊಡ್ದ ದೊಡ್ದ ರಾಜಕಾರಣಿಗಳ ಸಹಾಯ ನನಗೆ ಇದೇ ಎಂದು ಭೂಮಿಕಾ ಕುಟುಂಬದವರುಗೆ ಹೇಳಿದ್ದು ತಿಳಿದು ಬಂದಿದೆ. ಕೊಲೆಯಾಗಿ ಎಂಟು ದಿನಗಳೇ ಕಳೆದರು ಆರೋಪಿಯನ್ನು ಬಂಧಿಸುವಲ್ಲಿ ವಿಫಲರಾದ ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಒಂದು ವೇಳೆ ಆರೋಪಿಯನ್ನು ಇನ್ನೆರಡು ದಿನಗಳಲ್ಲಿ ಬಂಧಿಸದೇ ಹೋದರೆ ನಮ್ಮ ಮಹಾ ಶಕ್ತಿ ಮಹಿಳಾ ಸಬಲೀಕರಣ ಸಂಘಟನೆಯು ಮಸ್ಕಿ ಪಟ್ಟಣದಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಭೂಮಿಕಾಳ ಮನೆಗೆ ಕುಟುಂಬದವರಿಗೆ ಸಾಂತ್ವನ ಹೇಳಲು ತೆರಳಿದ ಸಂಧರ್ಭದಲ್ಲಿ ಮಹಾ ಶಕ್ತಿ ಮಹಿಳಾ ಸಬಲೀಕರಣ ಸಂಘಟನೆಯ ರಾಜ್ಯಾಧ್ಯಕ್ಷೆ ವಿಜಯರಾಣಿ ಸಿರವಾರ ರವರು ಪೊಲೀಸ್ ಇಲಾಖೆಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಶಿವಲೀಲಾ,ಶ್ರಿಮತಿ ವಿಜಯರಾಣಿ ಸಿರವಾರ ರಾಜ್ಯಾಧ್ಯಕ್ಷರು,ಕಮಲಮ್ಮ ಕವಿತಾಳ ಜಿಲ್ಲಾ ಅಧ್ಯಕ್ಷರು, ದುರುಗಮ್ಮ ಮಸ್ಕಿ ತಾಲೂಕಾ ಅಧ್ಯಕ್ಷರು, ಜಯಲಕ್ಷ್ಮೀ ರಾಜ್ಯ ಉಪಾಧ್ಯಕ್ಷರು, ತಾಯಮ್ಮ, ಪ್ರಮೀಳಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Join Whatsapp